ಬೊಳಿಕ್ಕಲ ಶಾಲಾ ಶಿಕ್ಷಕಿ ನೇತ್ರಾವತಿಯವರಿಗೆ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಬೊಳಿಕ್ಕಲ ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಕರ್ತವ್ಯದಿಂದ ನಿವೃತ್ತರಾದ ನೇತ್ರಾವತಿ ಎ.ರವರಿಗೆ ಬೀಳ್ಕೊಡುಗೆ ಸಮಾರಂಭವು ಜು.26ರಂದು ಬೊಳಿಕ್ಕಲ ಶಾಲೆಯಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ರಾಮಣ್ಣ ಗೌಡ ಜ್ಯೋತಿ ನಿಲಯರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೆಯ್ಯೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲರವರು ಇಲಾಖಾ ವತಿಯಿಂದ ಸನ್ಮಾನಿಸಿ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ಶಿಕ್ಷಕಿಯಾಗಿದ್ದ ನೇತ್ರಾವತಿಯವರು ಒಬ್ಬರು ಒಳ್ಳೆಯ ಶಿಕ್ಷಕಿಯಾಗಿದ್ದರು ಎಂದು ಶಿಕ್ಷಕ ವೃತ್ತಿಯ ಬಗ್ಗೆ ಮಾತುಗಳನ್ನಾಡಿ ಶುಭ ಹಾರೈಸಿದರು.


ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಕಲಾಯಿ ನಾರಾಯಣ ರೈ, ನಿವೃತ್ತ ಮುಖ್ಯಗುರು ಸುಧಾಕರ ರೈ, ಹಾಲು ಸೊಸೈಟಿಯ ಉಪಾಧ್ಯಕ್ಷ ಚಂದ್ರಹಾಸ ರೈ ಬೊಳಿಕ್ಕಲಮಠ, ಕೆಯ್ಯೂರು ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈ, ಪಾಪೆಮಜಲು ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶಶಿಕಲಾ ಎಂ, ಕೆಪಿಎಸ್ ಕುಂಬ್ರದ ಸಹಶಿಕ್ಷಕಿ ದಿವ್ಯ ರೈ ಪಿ, ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ರಾಧಾಕೃಷ್ಣ ಗೌಡರವರುಗಳು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೋನಪ್ಪ ಮೂಲ್ಯರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕಿ ನೇತ್ರಾವತಿಯವರು ಶಾಲೆಗೆ ತನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾ ಮುಂದೆಯೂ ಅವರ ಸಹಕಾರವನ್ನು ಬಯಸುತ್ತೇವೆ ಎಂದು ಹೇಳಿ ಶುಭ ಹಾರೈಸಿದರು. ಮುಖ್ಯಗುರು ಸೋಮಾವತಿ ಎ.ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಮಾ ಎನ್.ಜಿ, ಪ್ರಾರ್ಥನಾ ಪಿ, ಜನ್ಯತಾ ಪ್ರಾರ್ಥಿಸಿದರು.

ಅತಿಥಿ ಶಿಕ್ಷಕಿ ಶ್ವೇತಾ ರೈ ಎಂ ಸನ್ಮಾನ ಪತ್ರ ವಾಚಿಸಿದರು. ಸಹ ಶಿಕ್ಷಕಿ ಶುತಿ ಕೆ ಸ್ವಾಗತಿಸಿದರು. ಗೌರವ ಶಿಕ್ಷಕಿ ಪದ್ಮಯ್ಯ ಪಿ.ವಂದಿಸಿದರು. ಸಹ ಶಿಕ್ಷಕಿ ರೂಪ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here