ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ರೋಟರಿ ಕ್ಲಬ್ ವತಿಯಿಂದ ಇಂಟರಾಕ್ಟ್ ಕ್ಲಬ್ಬಿನ ಅನುಸ್ಥಾಪನಾ ಸಮಾರಂಭ

0

ಪುತ್ತೂರು : ನೆಹರೂ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ , ರೋಟರಿ ಕ್ಲಬ್, ಪುತ್ತೂರು ಯುವ ಇದರ ಸಹಯೋಗದಲ್ಲಿ, ಇಂಟರಾಕ್ಟ್ ಕ್ಲಬ್ ಆಫ್ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಅನುಸ್ಥಾಪನೆ ಮತ್ತು ಪ್ರಮಾಣವಚನ ಸಮಾರಂಭವು ನೆರವೇರಿತು.

ಮುಖ್ಯ ಅತಿಥಿಯಾಗಿ ರತ್ನಾಕಾರ್ ರೈ, ಇನ್ಸ್ಟಾಲಿಂಗ್ ಆಫೀಸಿರ್,ಇಂಟರಾಕ್ಟ್ ಕ್ಲಬ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಅದೇ ರೀತಿಯಲ್ಲಿ, ಸಮಾಜದ ಸುಸ್ಥಿರತೆಯನ್ನು ಕಾಪಾಡುವ ಹೊಣೆ ನಿಮ್ಮದಾಗಬೇಕು ಎಂದರು.

10ನೇ ತರಗತಿಯ ಇಶಾನ್ ಕೆ. ಇಂಟೆರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ, 9ನೇ ತರಗತಿಯ ಅರ್ಪಣ್ ಉಪಾಧ್ಯಕ್ಷರಾಗಿ, 10ನೇ ತರಗತಿಯ ಶ್ಯಾಮ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಜೊತೆಗೆ, ಇತರ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಅಭ್ಯರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

ಅತಿಥಿಗಳಾಗಿ ಕುಸುಮ್ ರಾಜ್, ಅಧ್ಯಕ್ಷರು ರೋಟರಿ ಕ್ಲಬ್, ಅಭಿಶ್. ಕೆ, ಕಾರ್ಯದರ್ಶಿಗಳು ರೋಟರಿ ಕ್ಲಬ್, ಪ್ರಜ್ಞಾ ಸಿದ್ಧಾರ್ಥ್ ಮುಳಿಯ, ಯೂತ್ ಸರ್ವಿಸ್ ಡೈರೆಕ್ಟರ್, ಡಾ. ದೀಪಕ್ ಕೆ . ಬಿ, ಇಂಟರಾಕ್ಟ್ ಸಂಯೋಜಕರು , ಭರತ್ .ಪೈ, ಶಾಲಾ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಸಿಂಧು ವಿ.ಜಿ. ಮತ್ತು ಶಾಲಾ ಇಂಟರಾಕ್ಟ್ ಕ್ಲಬ್ ನ ಸಂಯೋಜಕರಾದ ಹರಿಣಾಕ್ಷಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೇದಿಕ ಭಟ್ ಮತ್ತು ಶಾರ್ವರಿ . ಪಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here