ನಿಡ್ಪಳ್ಳಿ : ಇಲ್ಲಿಯ ಕೂಟೇಲು ಬರೆ ಶ್ರೀ ಶಾಂತದುರ್ಗಾ ದೇವಸ್ಥಾನ ರಸ್ತೆಯ ಅಲ್ಲಲ್ಲಿ ಹೊಂಡ ಗುಂಡಿ ಬಿದ್ದು ಕೆಸರು ತುಂಬಿದ್ದು ಸಂಚಾರಕ್ಕೆ ಬಹಳ ಸಮಸ್ಯೆಯಾಗಿದೆ.ಬರೆ ಮತ್ತು ನಿಡ್ಪಳ್ಳಿ ಗುತ್ತು ಚಾವಡಿ ಸಮೀಪ ರಸ್ತೆ ತೀರಾ ಕೆಟ್ಟು ಹೋಗಿದ್ದು ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ನಡೆದಾಡಲೂ ಕಷ್ಟವಾಗಿದೆ.
ಇದನ್ನು ಮನಗಂಡ ಸ್ಥಳೀಯರಾದ ಚಂದ್ರಶೇಖರ ಪ್ರಭು ಗೋಳಿತ್ತಡಿ,ಪದ್ಮನಾಭ ಕುಲಾಲ್ ಗುರಿ, ರಾಮಚಂದ್ರ ಮಣಿಯಾಣಿ ಗೋಳಿತ್ತಡಿ, ದಯಾನಂದ ನಾಯ್ಕ ಚಿಕ್ಕೋಡಿ, ಸತೀಶ ಗೌಡ ಅಂಗಡಿಮಜಲು, ಪ್ರವೀಣ ಸಿ.ಎಚ್ ಚೆಕ್ಕಿತೋಟ, ವಿಮರ್ಶ್ ಆಳ್ವ ಗೋಳಿತ್ತಡಿ ಸೇರಿ ಆ.11 ರಂದು ಕಲ್ಲು ಮಣ್ಣು ಹಾಕಿ ಶ್ರಮದಾನದ ಮೂಲಕ ಗುಂಡಿ ಮುಚ್ಚುವ ಕೆಲಸ ಮಾಡಿದರು.