ʼಕೆಂಪು ಕಲ್ಲು ತೆಗೆಯೋದಂದ್ರೆ ಬಂಗಾರ ತೆಗೆಯುವುದಲ್ಲʼ- ಕೆಂಪು ಕಲ್ಲಿನ ಸಮಸ್ಯೆ ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ಗಾರೆ ಕೆಲಸದವರು ನಿರ್ಗತಿಕರಾಗಿದ್ದಾರೆ.ನಮಗೆ ಇಲ್ಲೀಗಲ್ ಆಕ್ಟಿವಿಟೀಸ್ ಬೇಡ.ಆದರೆ ನಿಯಮದಲ್ಲಿ ಸಡಿಲೀಕರಣ ಮಾಡಿ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಸರಕಾರವನ್ನು ಒತ್ತಾಯಿಸಿದ್ದಾರೆ.


ವಿಧಾನಸಭಾ ಮುಂಗಾರು ಅಧಿವೇಶನದ ಪ್ರಥಮ ದಿನವೇ ಈ ಕುರಿತು ಶಾಸಕರು ವಿಷಯ ಪ್ರಸ್ತಾಪಿಸಿ,ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಇಷ್ಟು ವರ್ಷದಿಂದ ಕೆಂಪು ಕಲ್ಲಿನ ಬಿಸಿನೆಸ್ ಮತ್ತು ಮರಳು ಸರಿಯಾಗಿ ನಡೀತಿತ್ತು.ಕೆಂಪು ಕಲ್ಲು ತೆಗೆಯೋದಂದ್ರೆ ಬಂಗಾರ ತೆಗೆಯೋದಲ್ಲ.ಇದಕ್ಕೊಂದು ದೊಡ್ಡ ರೂಪುರೇಖೆ ಕೊಟ್ಟು ಕೆಂಪು ಕಲ್ಲು ಸಾಗಾಟ ಮಾಡುವವರನ್ನು ಹಿಡಿಯುವಂಥದ್ದು,ಅವರ ಮೇಲೆ ಕೇಸು ಹಾಕುವಂಥದ್ದು ನಡೆಯುತ್ತಿದೆ.ಮೊದಲು 3ಎಎಯಡಿ ಕೆಂಪು ಕಲ್ಲಿಗೆ ಪರ್ಮಿಷನ್ ಕೊಡ್ತಾ ಇದ್ದದ್ದು.ಕೇರಳದ ಪಕ್ಕ ಇರುವ ಕ್ಷೇತ್ರ ನಮ್ಮದು. ಒಂದೇ ಒಂದು ಲೈಸೆನ್ಸ್ ಇಷ್ಟರವರೆಗೆ ಕೊಟ್ಟಿಲ್ಲ.ಸುಮಾರು 9 ಜನ ಅಪ್ಲಿಕೇಶನ್ ಹಾಕಿದ್ದಾರೆ. ನಮ್ಮಲ್ಲೆಲ್ಲ ಜಾಯಿಂಟ್ ಆರ್‌ಟಿಸಿ ಇರುವುದು.ಸೆಪರೇಟ್ ಆರ್‌ಟಿಸಿ ಬೇಕು ಹೇಳುವುದು ನಮ್ಮಲ್ಲಿ ಅದು ಸಾಧ್ಯವಿಲ್ಲ. ಮೊದಲು ಎನ್‌ಐಟಿಕೆಯಲ್ಲಿ ಮಣ್ಣು ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಬೆಂಗಳೂರಿಗೆ ತಂದು ಬೆಂಗಳೂರು ನಿರ್ದೇಶಕರ ಕಚೇರಿಯಲ್ಲಿ ಕೆಮೆಸ್ಟ್ರಿಲ್ಯಾಬ್‌ನಲ್ಲಿ ಮಣ್ಣು ಪರೀಕ್ಷೆ ಮಾಡಬೇಕೆಂದು ಹೇಳುವುದು ಇದೆಲ್ಲ ಸರಿಯಲ್ಲ.ಅದಲ್ಲದೆ ಕೆಂಪು ಕಲ್ಲು ಒಂದು ಟನ್‌ಗೆ 256 ರೂ.ರಾಯಲ್ಟಿಯನ್ನು ಹಾಕುತ್ತಾರೆ.ಇದೇ ಪಕ್ಕದಲ್ಲಿರುವ ಕೇರಳದಲ್ಲಿರುವುದು ಕೇವಲ 26 ರೂ.ರಾಯಲ್ಟಿ. ಅದಾದ ಬಳಿಕ 3ಎಎರಲ್ಲಿ ಇನ್ನೊಂದು ಲೈಸನ್ಸ್ ಇಶ್ಯೂ ಮಾಡಿ ಅದರಲ್ಲಿ ಈ ಮಣ್ಣನ್ನು ಬಾಕ್ಸೈಟ್ ಅಂದರೆ ಸಿಮೆಂಟ್ ಮಾಡುವಲ್ಲಿ ಬಳಸುವಂಥದ್ದು.ಅದಕ್ಕೂ ಇದಕ್ಕೂ ಹೋಲಿಕೆ ಮಾಡಿ ಅದಕ್ಕೆ ಹಾಕುವಂಥ ತೆರಿಗೆಯನ್ನು ಕೆಂಪು ಕಲ್ಲಿನ ಮೇಲೆ ಹಾಕ್ತಾರೆ.ಕೆಂಪು ಕಲ್ಲು ಸ್ಥಗಿತಗೊಂಡಿರುವುದರಿಂದ ಎಷ್ಟೋ ಜನ ನಿರ್ಗತಿಕರಾಗಿದ್ದಾರೆ. ಈ ನಿಟ್ಟಿನಲ್ಲಿ ಇದನ್ನು ಸಡಿಲಿಕೆ ಮಾಡಿ.ಸೆಪರೇಟ್ ಆರ್‌ಟಿಸಿ ಕೇಳುವುದು, ಮಣ್ಣು ಪರೀಕ್ಷೆ ಮಾಡಲು ಹೇಳುವುದು ಇತ್ಯಾದಿ ಬೇಡ.ಇವತ್ತು ಎಷ್ಟೋ ಜನ ಗಾರೆ ಕೆಲಸ ಮಾಡುವವರು ನಿರ್ಗತಿಕರಾಗಿದ್ದಾರೆ.ಒಂದು ಕಡೆಯಿಂದ ಪೊಲೀಸರ ಕಾಟ ಮತ್ತೊಂದು ಕಡೆ ಗಣಿ ಇಲಾಖೆಯವರ ಕಾಟ.ಕಲ್ಲಿನ ವ್ಯಾಪಾರ ನಮ್ಮ ಭಾಗದಲ್ಲಿ ಮಾತ್ರ ಅದೂ ನಾಲ್ಕೈದು ತಿಂಗಳು ಕಲ್ಲಿನ ವ್ಯಾಪಾರ ಮಾಡ್ತಾರೆ.ಅದಕ್ಕೆ ಇಷ್ಟೊಂದು ಕಠಿಣ ನಿಯಮಗಳನ್ನು ತಂದರೆ ಹೇಗೆ?ಕಾನೂನು ತರಲಿ ನಮಗೇನು ಇಲ್ಲೀಗಲ್ ಆಕ್ಟಿವಿಟೀಸ್ ಬೇಡ.ಆದರೆ ನಿಯಮ ಸಡಿಲಿಕೆ ಮಾಡಬೇಕು ಎಂದು ಹೇಳಿದ ಶಾಸಕರು, ಕಳೆದ ನಾಲ್ಕೈದು ತಿಂಗಳಿನಿಂದ ಗಾರೆ ಕೆಲಸದವರಿಗೆ ಕೆಲಸವಿಲ್ಲ.ಕಾನೂನು ಮಾಡ್ತೇವೆ,ಕಾನೂನು ಮಾಡ್ತೇವೆ ನಾಡಿದ್ದು ಮಾಡ್ತೇವೆ ಹೇಳ್ತೇವೆ.ಮೂರು ತಿಂಗಳಿನಿಂದ ಇದಕ್ಕೆ ಸಂಬಂಽಸಿ ಸಭೆಗಳು ನಡೆದಿದೆ.ಇದಕ್ಕೆ ಕಾನೂನು ಮಾಡ್ಲಿಕ್ಕೆ ಇದೇನು ಇಲ್ಲೀಗಲ್ ಆಕ್ಟಿವಿಟೀಸ್ ಅಲ್ಲ,ಇದನ್ನು ಯಾರೂ ವಿರೋಧ ಮಾಡುವಂಥದ್ದಿಲ್ಲ.ನಿಮಗೂ ಇದರ ಬಗ್ಗೆ ಮಾಹಿತಿ ಇದೆ.ದಯಮಾಡಿ ಕೂಡಲೇ ಇದಕ್ಕೊಂದು ಪರಿಹಾರ ಕೊಡುವ ಕೆಲಸವನ್ನು ಮಾಡಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.ಇವತ್ತು ಈ ಕುರಿತು ಮೀಟಿಂಗ್ ಇದೆ ಹೇಳಿದ್ರು ಅದರಲ್ಲೂ ಇದನ್ನು ಚರ್ಚೆ ಮಾಡಿ ಪರಿಹಾರ ಕೊಡುವ ಕೆಲಸ ಆಗಬೇಕು ಎಂದು ಶಾಸಕರು ಆಗ್ರಹಿಸಿದರು.

ಈ ನಡುವೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಆಯ್ತು ನಾಳೆ ಸಭೆ ಉಂಟು ಹೇಳಿದ್ರಲ್ಲ ಎಂದಾಗ ‘ಈರೆಗ್‌ಲ ಸಮಸ್ಯೆ ಗೊತ್ತುಂಡು ಸಭಾಧ್ಯಕ್ಷರೇ ದಯಮಾಲ್ತ್ ನೆಕ್ಕೊಂಜಿ ಪರಿಹಾರ ಕೊರೊಡು’(ನಿಮಗೂ ಸಮಸ್ಯೆ ಗೊತ್ತಿದೆ.ದಯಾಮಾಡಿ ಇದಕ್ಕೊಂದು ಪರಿಹಾರ ಒದಗಿಸಬೇಕು)ಎಂದು ಶಾಸಕರು ಆಗ್ರಹಿಸಿದರು.ನೀವು ತುಳುವಿನಲ್ಲಿ ಮಾತನಾಡಿದರೆ ಅವರಿಗೆ ಅರ್ಥ ಆಗ್ತದಾ ಎಂದು ಹೇಳಿದ ಸಭಾಧ್ಯಕ್ಷರು, ಆಯ್ತು ನಾಳೆ ಮೀಟಿಂಗ್ ಇದೆ.ಅಲ್ಲಿ ತೀರ್ಮಾನವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ
ಶಾಸಕರ ಪ್ರಶ್ನೆಗೆ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕಾ ಸಚಿವರ ಪರವಾಗಿ ಉತ್ತರ ನೀಡಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ಅವರು, ಶಾಸಕ ಅಶೋಕ್ ಕುಮಾರ್ ರೈಯವರ ಕಳಕಳಿ ಅರ್ಥ ಮಾಡಿಕೊಳ್ತೇವೆ.ನಾವು ಈ ವಿಷಯದಲ್ಲಿ ವಿಶೇಷವಾಗಿ ಆಸಕ್ತಿ ವಹಿಸಿ ಉತ್ತರ ಕೊಟ್ಟಿದ್ದೇವೆ.ಈ ಸಮಸ್ಯೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನವಾಗಲಿದೆ.ಈ ಉತ್ತರದ ಮುಂದಿನ ಭಾಗವಾಗಿ ನಾಳೆ ಅಂತಿಮ ನಿರ್ಣಯ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಭೆ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here