‘ಇವರ ಎಡಬಿಡಂಗಿತನ, ಅಸಂಬದ್ಧ ಹೇಳಿಕೆಗಳಿಂದ ಅವರು ಸೋತರು, ಕಾಂಗ್ರೆಸ್ಸನ್ನು ಸೋಲಿಸಿದರು’- ಜನಾರ್ದನ ಪೂಜಾರಿಯವರ ಮಾತಿಗೆ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿದ ಮಹಮ್ಮದ್ ಆಲಿ

0

ಪುತ್ತೂರು: ನಿನ್ನೆ ಮೊನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ನಮ್ಮ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರ ಹೇಳಿಕೆ ವೈರಲ್‌ ಆಗುತ್ತಿದೆ. ಅವರು ಧರ್ಮಸ್ಥಳದ ಪರವಾಗಿ ಮಾತನಾಡುವಾಗ ಕ್ರೈಸ್ತ ಮತ್ತು ಮುಸ್ಲಿಂ ಮರ ದಫನ ಭೂಮಿಯ ಕುರಿತಾಗಿಯೂ ಮಾತನಾಡಿದ್ದಾರೆ. ಅವರು ಮಸೀದಿಯಲ್ಲಿ ಹೂಳಿಲ್ವಾ? ಚರ್ಚಲ್ಲಿ ಹೂಳಿಲ್ವಾ? ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಇದು ಕಾಂಗ್ರೆಸ್‌ ಗೆ ತುಂಬಾ ಮುಜುಗರ ತರುವಂತಹ ವಿಚಾರ ಮತ್ತು ಮುಸಲ್ಮಾನ ಸಮುದಾಯಕ್ಕೆ ತುಂಬಾ ನೋವನ್ನು ತರುವ ವಿಚಾರ ಎಂದು ಪುತ್ತೂರು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅವರ ಈ ಹೇಳಿಕೆ ಖಂಡನೀಯ. ದಫನ ಭೂಮಿ ಇರುವಂತಹುದು ಮಸೀದಿಯಲ್ಲಿ ಅಲ್ಲ.ಮಸೀದಿಯ ಪಕ್ಕದ ಸ್ಮಶಾನ ಭೂಮಿಯಲ್ಲಿ ಇರುವುದು. ಚರ್ಚಿನ ಪಕ್ಕ ಚರ್ಚಿನ ಪಕ್ಕ ದಫನ ಭೂಮಿಗಳಿವೆ. ಅದು ಅಧಿಕೃತ ಧಪನ ಭೂಮಿ. ಯಾರೂ ಮರಣಹೊಂದಿದ್ದಾರೆ ಅವರ ಸಂಸ್ಕಾರವನ್ನು ಗೌರವಯುತವಾಗಿ ಅಲ್ಲಿ ಹೂಳಾಲಾಗುತ್ತದೆ. ಇದು ಹಿಂದಿನಿಂದಲೇ ಬಂದ ಪದ್ದತಿ.ದಫನಗೊಂಡಿರುವವರ ಎಲ್ಲಾ ದಾಖಲೆಗಳು ಮಸೀದಿಯಲ್ಲಿ ಇದೆ. ಚರ್ಚಿನದ್ದೂ ಇರುತ್ತದೆ. ಧರ್ಮಸ್ಥಳ ಪ್ರಕರಣಕ್ಕೂ, ಮಸೀದಿ ಚರ್ಚಿನ ವಿಷಯ ಯಾಕೆ ತರ್ಬೇಕಿತ್ತು ಇವರು. ಅವಶ್ಯಕತೆಯೇ ಇರಲಿಲ್ಲ.1977ರ ನಂತರ ಯಾರೆಲ್ಲ ಸತ್ತು ಮಲಗಿದ್ದಾರೆ ಅವರೆಲ್ಲ ಜನಾರ್ದನ ಪೂಜಾರಿ ಅವರಿಗೆ ಮತ ಹಾಕಿದವರು. ಅದು ಕ್ರೈಸ್ತ, ಮುಸ್ಲಿಂ ಆಗಿರಬಹುದು ಇವರಿಗಾಗಿ ಮತ, ಕೆಲಸ ಮಾಡಿದವರು ಎಂದರು.

ಇವರು ಧರ್ಮಸ್ಥಳದ ಪರ ಮಾತನಾಡಲಿ, ವಿರೋಧ ಮಾತನಾಡಲಿ ನಮ್ಮ ಆಕ್ಷೇಪ ಇಲ್ಲ. ಆದರೆ ಯಾವುದೇ ವಿಚಾರ ತರುವಾಗ ಮುಸಲ್ಮಾನ, ಕ್ರೈಸ್ತರ ವಿಚಾರ ಯಾಕೆ ತರುತ್ತೀರಿ ನೀವು. ನೀವು 9 ಸಲ ಚುನಾವಣೆಗೆ ನಿಂತಾಗ ಗೆದ್ದಾಗಲೂ, ಸೋತಾಗಲೂ ಮತ ಹಾಕಿದ್ದು ಮುಸಲ್ಮಾನರು, ಕ್ರೈಸ್ತರು ಇದು ಅವರಿಗೆ ನೆನಪಿರಬೇಕು.ನಾವು ತುಂಬಾ ಗೌರವ ಕೊಡುವಂತಹ ನಾಯಕರು. ಇವರ ಎಡಬಿಡಂಗಿತನ, ಅಸಂಬದ್ಧ ಹೇಳಿಕೆಗಳಿಂದ ಅವರು ಸೋತರು, ಕಾಂಗ್ರೆಸ್ಸನ್ನು ಸೋಲಿಸಿದರು.

ಯಾವುದೇ ಮುಸಲ್ಮಾನರು, ನಾಯಕರು, ಉಲೆಮಾ, ಮುಖಂಡರು ಇಷ್ಟರವರೆ ಧರ್ಮಸ್ಥಳ ಕುರಿತು ಚಕಾರ ಎತ್ತಿಲಿಲ್ಲ. ಸೌಜನ್ಯ, ಪದ್ಮಲತಾ, ವೇದವಳ್ಳಿ ಪ್ರಕರಣಗಳಲ್ಲಿ ಯಾರೂ ಮಾತನಾಡಲಿಲ್ಲ, ಯಾಕೆಂದರೆ ನಮಗೆ ಅದು ಸಂಬಂಧಿಸಿದಲ್ಲ. ಬಿಜೆಪಿಯವರು ಮಾತನಾಡುವುದೇ ಮುಸ್ಲಿಂ, ಕೇರಳ, ಕಾಶ್ಮೀರ ಇಲ್ಲದೆ ಬದುಕುವುದಿಲ್ಲ. ಅವರು ಬೆಳಿಗ್ಗೆ ಎದ್ದು ಜಪ ಮಾಡುವುದೇ ಮುಸಲ್ಮಾನರನ್ನು. ಆದರೆ ಜನಾರ್ದನ ಪೂಜಾರಿಯವರು ಬಿಜೆಪಿ ದಾಟಿಯಲ್ಲಿ ಯಾಕೆ ಮಾತನಾಡಬೇಕು.ಕಾಂಗ್ರೆಸ್‌ ಪಕ್ಷ, ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಿದ್ದಾರೆ.ಪಕ್ಷದ ಸಿದ್ದಾಂತ, ಸಿದ್ದರಾಮಯ್ಯ ಕುರಿತು ತೆಗಳಿ ಮೋದಿಯವರನ್ನು ಹೊಗಳಿದ್ದಾರೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಮಾತನಾಡಲಿಲ್ಲ. ಇನ್ನು ನಮಿಗೆ ಸಹನೆ ಇಲ್ಲ.ನಾನು ಇವರಿಗೆ ಹಾಕಿದಷ್ಟು ಜಯಕಾರ ಬೇರೆ ಯಾವ ನಾಯಕರಿಗೂ ಹಾಕಲಿಲ್ಲ ಎಂದರು.

ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಜನಾರ್ದನ ಪೂಜಾರಿಯವರು ಚರ್ಚ್ ಮತ್ತು ಮಸೀದಿಗಳಲ್ಲಿ ಶವ ದಫನ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಚರ್ಚ್ ವಠಾರದಲ್ಲಿ ಶವ ದಫನ ಮಾಡಿದ್ದು ಇದೆ. ನಾನು ಇಲ್ಲ ಅಂತ ಹೇಳುವುದಿಲ್ಲ. ಆದರೆ ಅದು ಸಂತರದ್ದು ಆಗಿದೆ. 50 ವರ್ಷಗಳ ಹಿಂದೆ. ಇದೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಚರ್ಚ್ ವಠಾರದಲ್ಲಿ ದಫನ ಮಾಡುವಂತಿಲ್ಲ ತಿದ್ದುಪಡಿ ಮಾಡಲಾಯಿತು. ಅದಾದ ಬಳಿಕ ದಫನ ಭೂಮಿಯಲ್ಲೇ ದಪನ ಕಾರ್ಯ ನಡೆಯುತ್ತದೆ. ಸರಕಾರ ಪ್ರತಿ ಚರ್ಚ್ ವ್ಯಾಪ್ತಿಗೆ ದಫನ್ ಭೂಮಿಯನ್ನು ಕೂಡಾ ನೀಡಿದೆ. ಅದರ ಅಭಿವೃದ್ಧಿಗೂ ಅನುದಾನ ನೀಡುತ್ತಿದೆ. ಆ ದಫನ ಭೂಮಿಯಲ್ಲಿ ಅನಾಮಧೇಯ ಶವ, ಸಂಶಯಾಸ್ಪದ ಶವ ದಫನ ಮಾಡಲಾಗುವುದಿಲ್ಲ. ಅಂತಹ ವಿಚಾರದಲ್ಲಿ ಇಲಾಖೆಯಿಂದ ನಿರಾಕ್ಷೇಪನ ಪತ್ರ ತರಬೇಕಾಗುತ್ತದೆ. ಇಂತಹ ಎಲ್ಲಾ ವಿಚಾರಗಳು ಇರುವಾಗ ಜನಾರ್ದನ ಪೂಜಾರಿಯವರು ಇಲ್ಲಸಲ್ಲದ ಹೇಳಿಕೆ ನೀಡುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಸಂಘಟನಾ ಕಾರ್ಯದರ್ಶಿ ವಾಲ್ಟರ್ ಸಿಕ್ವೆರಾ, ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here