ಪುತ್ತೂರು: ಪುತ್ತೂರು ಆನೆಮಜಲಿನಲ್ಲಿ ನೂತನವಾಗಿ ನಿರ್ಮಾಣದ ಗುತ್ತಿಗೆ ಕಾರ್ಯ ನಿರ್ವಹಿಸುತ್ತಿರುವ ಸೀದಿ ಕನ್ ಸ್ಟ್ರಕ್ಷನ್ ನ ಇಂಜಿನಿಯರ್ ರಾಘವೇಂದ್ರ ಯಾನೆ ರಘು (43 ವ) ರವರು ಆ.12 ರ ರಾತ್ರಿ ಮಂಗಳೂರಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ರಾಘವೇಂದ್ರ ಅವರು ಮಂಗಳೂರು ತೊಕ್ಕೊಟ್ಟಿನಲ್ಲಿ ಚಲಾಯಿಸುತ್ತಿದ್ದ ವಾಹನ ಅಪಘಾತಗೊಂಡು ಮೃತಪಟ್ಟಿದ್ದಾರೆ. ಮೃತರು ಪತ್ನಿ ಶ್ವೇತಾ, ಪುತ್ರನನ್ನು ಅಗಲಿದ್ದಾರೆ. ಇಂಜಿನಿಯರಿಂಗ್ ಕ್ಚೇತ್ರದಲ್ಲಿ ಸುಮಾರು 20 ವರ್ಷ ಅನುಭವಿ ಹೊಂದಿರುವ ಅವರು ಸೀದಿ ಕನ್ ಸ್ಟ್ರಕ್ಷನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಗುತ್ತಿಗೆಯಲ್ಲಿ ಪುತ್ತೂರು ಆನೆಮಜಲಿನಲ್ಲಿ ನಡೆಯುತ್ತಿರುವ ನಿರ್ಮಾಣ ಹಂತದ ನ್ಯಾಯಾಲಯದಲ್ಲೂ ಇಂಜಿನಿಯರ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು. ಆ.12 ರಂದು ಮಧ್ಯಾಹ್ನ ನಿರ್ಮಾಣ ಹಂತದ ನ್ಯಾಯಾಲಯದ ಸ್ಥಳದಲ್ಲಿ ಇದ್ದು ಕೆಲಸ ಕಾರ್ಯ ನೋಡಿ ಸಂಜೆ ಮಂಗಳೂರು ಮನೆಗೆ ತೆರಳಿದ್ದರು. ಅಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.