ಒಳಮೊಗ್ರು ಗ್ರಾಪಂ ಪಿಡಿಒ ಸುರೇಶ್‌ರವರಿಗೆ ವರ್ತಕರ ಸಂಘದಿಂದ ಸ್ವಾಗತ

0

ಪುತ್ತೂರು: ಒಳಮೊಗ್ರು ಪಂಚಾಯತ್‌ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಸುರೇಶ್ ಕೆ ರವರನ್ನು ಕುಂಬ್ರ ವರ್ತಕರ ಸಂಘದ ವತಿಯಿಂದ ಸ್ವಾಗತಿಲಾಯಿತು. ವರ್ತಕರ ಸಂಘದ ನಿಯೋಗವು ಪಂಚಾಯತ್‌ಗೆ ತೆರಳಿ ಸುರೇಶ್‌ರವರಿಗೆ ಶಾಲು ಹಾಕಿ, ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.


ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ ಕೆ ಮಹಮ್ಮದ್ ಕೂಡುರಸ್ತೆ, ಸ್ಥಾಪಕಾಧ್ಯಕ್ಷ ಶ್ಯಾಮ್ ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಉಪಾಧ್ಯಕ್ಷ ಸದಾಶಿವ ಕುಂಬ್ರ , ಪ್ರಧಾನ ಕಾರ್ಯದರ್ಶಿ ಭವ್ಯ ರೈ ಹಾಗೂ ಸಮಿತಿ ಸದಸ್ಯರಾದ ಲಕ್ಷ್ಮಣ ಕೆ ರವರು ಉಪಸ್ಥಿತರಿದ್ದರು.
ಚಿತ್ರ: ಸ್ವಾಗತ

LEAVE A REPLY

Please enter your comment!
Please enter your name here