ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ನ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ರಂಗನಾಥನ್ರವರ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಸದಸ್ಯರುಗಳಾದ ಮೀನಾಕ್ಷಿ ವಿ.ರೈ, ಸುಭಾಷಿಣಿ, ಮಮತಾ ರೈ, ಜಯಂತಿ ಎಸ್.ಭಂಡಾರಿ, ಗಿರಿಜಾ ಕೆ, ನೆಬಿಸಾ, ಅಬ್ದುಲ್ ಖಾದರ್ ಮೇರ್ಲ, ತಾರಾನಾಥ ಕಂಪ, ವಿಜಯಕುಮಾರ್ ಸಣಂಗಳ, ಶೇಷಪ್ಪ ದೇರ್ಲ, ಬಟ್ಯಪ್ಪ ರೈ ದೇರ್ಲ, ಜಯಂತ ಪೂಜಾರಿ ಕೆಂಗುಡೇಲು ಅಮಿತಾ ಹೆಚ್.ರೈ, ಗ್ರಂಥಾಲಯ ಮೇಲ್ವಿಚಾರಕಿ ಅನೂಷಾ ಕೆಯ್ಯೂರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.