ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ನಾರ್ಣಪ್ಪ ಸಾಲ್ಯಾನ್, ಅಧ್ಯಕ್ಷರಾಗಿ ಸುರೇಶ್ ಗೌಡ ಮಜಲು, ಪ್ರಧಾನ ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ವಾಲ್ತಜೆ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಜಯರಾಮ ಆಚಾರ್, ಬಾಲಕೃಷ್ಣ ಮುಂಡೋಡಿ, ಶರತ್ ವಾಲ್ತಾಜೆ ಹಾಗೂ ಆನಂದ ಬಲ್ಯಾಯ, ಉಪಾಧ್ಯಕ್ಷರುಗಳಾಗಿ ಶ್ರೀವಿಜೇಶ್ ನಾಯಕ್,ಸುಜಾತ, ಜೊತೆ ಕಾರ್ಯದರ್ಶಿಗಳಾಗಿ ತಾರಾನಾಥ ಯಂ, ವಿನಯ ಮರಕೂರು, ಸಂಘಟನಾ ಕಾರ್ಯದರ್ಶಿಗಳಾಗಿ ಯಜ್ಞೇಶ್, ಗಣೇಶ್, ವಿನಯ ಹಾಗೂ ಅಶ್ವಿತಾ, ಕೋಶಾಧಿಕಾರಿಗಳಾಗಿ ಹೇಮಂತ್, ಸಂಚಾಲಕರಾಗಿ ಗಣೇಶ್ ಪಂಜಿಗ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸೌಮ್ಯ ಮತ್ತು ವಿಕೇಶ್, ಕ್ರೀಡಾ ಕಾರ್ಯದರ್ಶಿಗಳಾಗಿ ಭವಿತ್ ಹಾಗೂ ಶಮಂತ್, ಮಾರ್ಗದರ್ಶಕರಾಗಿ ಮುಖ್ಯಗುರು ಫೇಲ್ಸಿಟಾ ಡಿ ಕುನ್ಹಾ, ಹರೀಶ್, ಸದಸ್ಯರುಗಳಾಗಿ ಜಯದೀಪ್, ಶಿವಪ್ರಸಾದ್, ಚಿತ್ರಾಕ್ಷಿ, ಶ್ರೀಧರ, ಮಹೇಶ್, ಕೇಶವ, ಸುಶ್ಮಿತ್, ಕೌಶಿಕ್ ಭಂಡಾರಿ, ಚಂದ್ರ ಹಾಗೂ ವಿಜೇತ್ ಆಯ್ಕೆಯಾದರು. ಕಾರ್ಯಕ್ರಮದ ವೇದಿಕೆಯಲ್ಲಿ ನಾರ್ಣಪ್ಪ ಸಾಲ್ಯಾನ್, ಹಿರಿಯರಾದ ಜಯರಾಮ ಆಚಾರ್, ಗಣೇಶ್ ಪಂಜಿಗ, ಹರೀಶ್, ಫೇಲ್ಸಿಟಾ ಡಿ ಕುನ್ಹಾ, ಸುಜಾತ ಉಪಸ್ಥಿತರಿದ್ದರು. ಸೌಮ್ಯ ಸ್ವಾಗತಿಸಿ, ಚಿತ್ರಾಕ್ಷಿ ವಂದನಾರ್ಪಣೆಗೈದರು. ಶಿಕ್ಷಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ನಿರ್ಗಮಿತ ಅಧ್ಯಕ್ಷ ನಾರಣಪ್ಪ ಸಾಲ್ಯಾನ್ ನೂತನ ಸಮಿತಿಗೆ ಶುಭ ಹಾರೈಸಿ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.