ಉಪ್ಪಿನಂಗಡಿ: ಪುತ್ತೂರು ತಾಲೂಕು ಮಟ್ಟದ ಸಂಜೀವಿನಿ ಮಾಸಿಕ ಸಂತೆ ಆ.14ರಂದು ಉಪ್ಪಿನಂಗಡಿ ಜಂಕ್ಷನ್ನಲ್ಲಿ ನಡೆಯಿತು.

ಪುತ್ತೂರು ತಾಲೂಕಿನ ಅರಿಯಡ್ಕ, ಒಳಮೊಗ್ರು ಕೆದಂಬಾಡಿ, ನರಿಮೊಗ್ರು, ಬನ್ನೂರು, ಕೋಡಿಂಬಾಡಿ, ಹಿರೇಬಂಡಾಡಿ, ಬಜತ್ತೂರು, 34ನೇ ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಸಂಜೀವಿನಿ ಒಕ್ಕೂಟಗಳ ಸುಮಾರು 30 ಸದಸ್ಯರು ಭಾಗವಹಿಸಿದ್ದರು. ಸಂತೆ ಮಾರುಕಟ್ಟೆಯಲ್ಲಿ ಚಾಪೆ, ಬುಟ್ಟಿ, ಊಟದ ಸ್ಪೂನ್, ಕುಡುಪು, ಲಿಂಬೆಹುಳಿ, ವೀಳ್ಯದೆಲೆ, ಕೆಸುವಿನ ಬಳ್ಳಿ, ಕೆಸುವಿನ ದಂಟು, ವಿಟಮಿನ್ ಸೊಪ್ಪು, ನುಗ್ಗೆಸೊಪ್ಪು, ತೆಂಗಿನಕಾಯಿ, ಅರಶಿನ ಎಲೆ, ಹೂಗುಚ್ಛಗಳು, ತರಕಾರಿ ಮತ್ತು ಸಿದ್ಧ ಉಡುಪುಗಳನ್ನು ಸಂಜೀವಿನಿ ಸಂತೆಯಲ್ಲಿ ಮಾರಾಟ ಮಾಡಲಾಯಿತು.