ನಂದನ ಸಹಕಾರಿ ನಿಯಮಿತ, ಹಾಗೂ ಹೆಗ್ಡೆ ಆರ್ಕೆಡ್ ನ ವ್ಯಾಪಾರಸ್ಥರ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ನಂದನ ಪುತ್ತೂರು ಚಿಟ್ಸ್ ಪ್ರೈ. ಲಿಮಿಟೆಡ್ ಮತ್ತು ಹೆಗ್ಡೆ ಆರ್ಕೆಡ್ ನ ವ್ಯಾಪಾರಸ್ಥರ ಸಹಯೋಗದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ದ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತಿ ಸೇನಾಧಿಕಾರಿ ಲಕ್ಷ್ಮೀಶ ಕೆ ರವರು ನೆರವೇರಿಸಿ ಶುಭಹಾರೈಸಿದರು. ಸ್ವಾಗತ ಭಾಷಣವನ್ನು ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷ ದಾಮೋದರ್ ಎಸ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂದನ ಪುತ್ತೂರು ಚಿಟ್ಸ್ ಪ್ರೈ. ಲಿ ನ ನಿರ್ದೇಶಕರಾದ ಸಂದೀಪ್ ಶಂಕರ್, ದಿನೇಶ್ ಕುಮಾರ್ ಎಚ್ ಜಿ, ಲಾರೆನ್ಸ್ ಎ ಪಿಂಟೋ, ಶ್ರೀ ಲತಾ ಎಸ್ ರೈ ಹಾಗೂ ಸಿಬ್ಬಂದಿಗಳಾದ ಮೋಹನ್ ಕುಮಾರ್, ಹರಿಪ್ರಿಯಾ,ಮೋಹಿನಿ, ಪ್ರೇಮಲತಾ ,ಮುಖ್ಯ ಕಾರ್ಯ ನಿರ್ವಹಣಧಿಕಾರಿ ಸೋಮಶೇಖರ್ ಮತ್ತು ಸುದ್ದಿ ಬಿಡುಗಡೆ ದಿನಪತ್ರಿಕೆಯ ಶ್ರೀಧರ ರೈ ಇವರು ಉಪಸ್ಥಿತರಿದ್ದರು.

ಹೆಗ್ಡೆ ಆರ್ಕೆಡ್ ನ ವ್ಯಾಪಾರಿಗಳಾದ ಸೋಜಾ ಮೆಟಲ್,ಎಮ್ ಚಂದು ಶೆಟ್ಟಿ, ಸುಪ್ರೀಂ ಪ್ಲಾಸ್ಟಿಕ್, ಡಿಬಿಸಿ, ಅರುಣ್ ಇಂಡಸ್ಟ್ರಿಯಲ್ ಪ್ರಾಡಕ್ಟ್, ಆರ್ ಕೆ ಜ್ಯುವೆಲ್,ಪ್ರೊಫೆಷನಲ್ ಕೊರಿಯರ್,ಶೆಣೈ ಬ್ರದರ್, ಆಶ್ಲೇಷ ಜ್ಯುವೆಲರಿ, ವಿವೇಕ್ ಸ್ಟೋರ್,ಫೈವ್ ಸ್ಟಾರ್ , ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ನಂದನ ಪುತ್ತೂರು ಚಿಟ್ಸ್ ಪ್ರೈ. ಲಿ, ಪರಮ್ ಕಂಪ್ಯೂಟರ್, ವಿಭಾ ಫ್ಯಾಷನ್, ಇ ಏನ್ ಟಿ ಕ್ಲಿನಿಕ್ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here