ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕೊರಮೇರು ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ, ಸ್ತ್ರೀಶಕ್ತಿ ಸಂಘ ಹಾಗೂ ಊರವರ ಸಹಯೋಗದೊಂದಿಗೆ ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಕೌಕ್ರಾಡಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು ಧ್ವಜಾರೋಹಣ ನೆರವೇರಿಸಿದರು.
ಕಡಬ ತಾ.ಪಂ. ಕೆಡಿಪಿ ಸದಸ್ಯ ಗಿರೀಶ್ ಸಾಲಿಯಾನ್ ಬದನೆ, ಗ್ರಾ.ಪಂ.ಸದಸ್ಯ ರೋಯಿ ಟಿ.ಎಂ.,ರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು. ಮಾಜಿ ಸೈನಿಕರಾದ ವರ್ಗೀಸ್ ಮ್ಯಾಥ್ಯು, ನೀಲಪ್ಪ ಗೌಡ, ಗ್ರಾ.ಪಂ.ಸದಸ್ಯೆ ಸಂಧ್ಯಾ, ಪ್ರಮುಖರಾದ ದಿವ್ಯೇಶ ಕಲ್ಯ, ಲಿಂಗಪ್ಪ ಗೌಡ, ರಾಮಕೃಷ್ಣ ಗೌಡ, ಮೋನಪ್ಪ ಗೌಡ ಕಲ್ಯ, ಮೋನಪ್ಪ ಗೌಡ ಕೊರಮೇರು, ರುಕ್ಮಯ ಗೌಡ ಕೊರಮೇರು, ರಮೇಶ ಕೊರಮೇರು, ಸಂತೋಷ್ ಉರೆಜಾಲು, ಆಶಾ ಕಾರ್ಯಕರ್ತೆ ಸಿನಿ ಟಿ.ಜೆ., ಅಂಗನವಾಡಿ ಸಹಾಯಕಿ ದಿವ್ಯಾ ಪಿ., ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಸತೀಶ್ ಕೊರಮೇರು ಘೋಷಣೆ ಕೂಗಿದರು. ಅಂಗನವಾಡಿ ಕಾರ್ಯಕರ್ತೆ ಜೆಸ್ಸಿ ವರ್ಗೀಸ್ ಸ್ವಾಗತಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.