
ಪುತ್ತೂರು: ಶ್ರೀ ಭಾರತೀ ಅಮರಜ್ಯೋತಿ ಮಂದಿರ ಅಮರಗಿರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸೈನಿಕನ ಹಸ್ತಕ್ಕೆ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಯುತ ಮೂಡೆತ್ತಾಯ ಧ್ವಜಾರೋಹಣಗೈದರು.
ಆಪರೇಷನ್ ಸಿಂಧೂರ ಹಾಗೂ ಸೇನೆಯಲ್ಲಿ 17 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ ಉರಿಕ್ಯಾಡಿ ಇವರಿಗೆ ಗೌರಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಧರ್ಮದರ್ಶಿಗಳಾದ ಶಿವರಾಂ ಪಿ, ಶಿವರಾಂ ಶರ್ಮ ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಸೈನಿಕರಾದ ಪ್ರವೀಣ್ ನೀರಳಿಕೆ ಮಾಡಿದರು. ಈ ಸಂದರ್ಭದಲ್ಲಿ ಊರಿನ ದೇಶಭಕ್ತರು ಉಪಸ್ಥಿತರಿದ್ದರು.