ಜನ್ಮ ಕ್ರಿಯೇಷನ್ಸ್ ಅರ್ಪಣೆ * ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣ * ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರಿಂದ ಲೋಕಾರ್ಪಣೆ * ಬೊಲ್ಪು ಯುಟ್ಯೂಬ್‌ನಲ್ಲಿ ಪ್ರಸಾರ

ಪುತ್ತೂರು: ‘ಅಪರೇಷನ್ ಸಿಂಧೂರ’ದ ಹಿನ್ನೆಲೆಯನ್ನಿಟ್ಟುಕೊಂಡು ಸಿಂಧೂರದ ಮಹತ್ವ ಹಾಗೂ ದೇಶಭಕ್ತಿಯ ನಿರೂಪಣೆಯನ್ನು ಸಾರುವ ಹಾಡಿನ ಮೂಲಕವೇ ಹಲವು ಸಸ್ಪೆನ್ಸ್‌ಗಳನ್ನು ತೆರೆದಿಡುವ ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಣೆಯ ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದ ‘ನಮಸ್ತೆ ಸಿಂಧೂರ’ವು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.15ರಂದು ದೆಹಲಿಯಲ್ಲಿ ಲೋಕಾರ್ಪಣೆಗೊಂಡಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‌ರವರು ಲೋಕಾರ್ಪಣೆ ಮಾಡಿದರು. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣರವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲೂ ನಮಸ್ತೆ ಸಿಂಧೂರ ರಾರಾಜಿಸಿದ್ದು ವಿಶೇಷವಾಗಿದೆ.
ವಿಭಿನ್ನ ಶೈಲಿಯ ದೇಶಭಕ್ತಿಯ ನಿರೂಪಣೆ
ಸುಮಾರು 5 ನಿಮಿಷಗಳ ಹಾಡಿನ ಮೂಲಕವೇ ರೋಚಕ ಕಥೆಯನ್ನು ಹೇಳುವ ‘ನಮಸ್ತೆ ಸಿಂಧೂರ’ ಒಂದು ವಿಭಿನ್ನ ಶೈಲಿಯ ದೇಶಭಕ್ತಿಯ ನಿರೂಪಣೆಯಾಗಿದೆ. ರಝಾಕ್ ಪುತ್ತೂರುರವರ ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನವಿದೆ. ಈ ಹಾಡಿನಲ್ಲಿ ಶರತ್ ಆಳ್ವ ಕೂರೇಲು, ವೆನ್ಯಾ ರೈ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣ್ ರೈ ಪುತ್ತೂರುರವರ ಛಾಯಾಗ್ರಹಣದ ಕೈಚಳಕ ಇಲ್ಲೂ ಕೆಲಸ ಮಾಡಿದ್ದು ಹಲವು ಸುಂದರ ದೃಶ್ಯಗಳನ್ನು ಹಾಡಿನಲ್ಲಿ ಕಾಣಬಹುದಾಗಿದೆ. ಈ ಹಾಡು ಪುತ್ತೂರು, ಮಂಗಳೂರು, ಪಡೀಲ್, ಸೋಮೇಶ್ವರ ಬೀಚ್‌ಗಳಲ್ಲಿ ಚಿತ್ರೀಕರಣಗೊಂಡಿದೆ. ಜಯ ಕಾರ್ತಿಕ್‌ರವರ ಸಂಗೀತವಿದ್ದು ಯಶ್ವಂತ್ ಎಂ.ಜಿ, ಸುಸ್ಮಿತಾ ಎಸ್.ಪಾಟಾಳಿ ಗಾಯನ ಯತೀಶ್ ಕುಲಾಲ್, ಅಭಿಲಾಷ್ ಕ್ಯಾಮರಾ ಸಹಾಯಕರಾಗಿ, ಶಿವಮ್ ಕ್ರಿಯೇಷನ್ಸ್ ಸಂಕಲನ, ಇನ್‌ಫಿನಿಟಿ ಪಾರ್ಲರ್ ಪುತ್ತೂರು ಮೇಕಪ್, ಪ್ರಸನ್ನ ರೈ ಮಜಲುಗದ್ದೆ ಪೋಸ್ಟರ್ ಡಿಸೈನ್‌ನಲ್ಲಿ ಸಹಕರಿಸಿದ್ದಾರೆ.
ಜನ್ಮ ಕ್ರಿಯೇಷನ್ಸ್ ಸಂಸ್ಥೆ
ಡಾ. ಹರ್ಷ ಕುಮಾರ್ ರೈ ಮಾಡಾವುರವರ ಜನ್ಮ ಕ್ರಿಯೇಷನ್ಸ್ ಸಂಸ್ಥೆ ಹೊಸ ಪ್ರತಿಭೆಗಳನ್ನು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳ ಹಲವು ಕಿರುಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿ ಮುದ್ರಿಕೆ ಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್ ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಸೇರಿದಂತೆ ಹಲವು ಕಿರುಚಿತ್ರಗಳನ್ನು ಲೋಕಾರ್ಪಣೆ ಮಾಡಿದ ಹೆಗ್ಗಳಿಕೆ ಸಂಸ್ಥೆಗಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಿಂದ ಲೋಕಾರ್ಪಣೆ
ನಮಸ್ತೆ ಸಿಂಧೂರವನ್ನು ಲೋಕಾರ್ಪಣೆಗೊಳಿಸಿದ್ದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‌ರವರು ಇಲ್ಲೊಂದು ವಿಶೇಷತೆಯನ್ನು ನಾವು ಕಾಣಬಹುದಾಗಿದೆ ಅದೇನೆಂದರೆ ‘ ಸಿಂಧೂರ’ ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ‘ಅಪರೇಷನ್ ಸಿಂಧೂರ’ ಭಾರತೀಯ ಪ್ರವಾಸಿಗರ ಹತ್ಯೆಯ ಪ್ರತಿಕಾರವಾಗಿದೆ. ಇದೇ ಕಥಾವಸ್ತು ಹೊಂದಿರುವ ‘ನಮಸ್ತೆ ಸಿಂಧೂರ’ ಎಂಬ ದೇಶಭಕ್ತಿ ನಿರೂಪಣೆಯ ಹಾಡನ್ನು ಲೋಕಾರ್ಪಣೆ ಮಾಡಿದ್ದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಇದು ವಿಶೇಷತೆಯಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣರವರು ಇದಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೆಂಪು ಕೋಟೆಯಲ್ಲಿ ರಾರಾಜಿಸಿದ ‘ನಮಸ್ತೆ ಸಿಂಧೂರ’
ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲೂ ‘ನಮಸ್ತೆ ಸಿಂಧೂರ’ ರಾರಾಜಿಸಿದ್ದು ವಿಶೇಷವಾಗಿದೆ.
ಬೊಲ್ಪು ಕ್ರಿಯೇಷನ್ಸ್ ಯೂಟ್ಯೂಬ್‌ನಲ್ಲಿ ವೀಕ್ಷಿಸಿ
‘ ನಮಸ್ತೆ ಸಿಂಧೂರ’ ದೇಶಭಕ್ತಿಯ ನಿರೂಪಣೆಯ ವಿಭಿನ್ನ ಶೈಲಿಯ ಗೀತ ರೂಪದ ಕಿರುಚಿತ್ರವನ್ನು ಬೊಲ್ಪು ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.