ಪುತ್ತೂರು: ಒಳಮೊಗ್ರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕುಂಬ್ರ ಆಕರ್ಷಣ್ ಗ್ರೌಂಡ್ನಲ್ಲಿ ಆಚರಿಸಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ಸಾರಿದರು. ಪ್ರತಿ ವಲಯದಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು ಎಂಬ ಬ್ಲಾಕ್ ಕಾಂಗ್ರೆಸ್ನ ಸೂಚನೆಯಂತೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಕಾರ್ಯದರ್ಶಿ ಶಮಿತ್ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಶಾರದಾ ಆಚಾರ್ಯ, ಬಿ.ಸಿ ಚಿತ್ರಾ, ಬೂತ್ ಅಧ್ಯಕ್ಷರುಗಳಾದ ಚೆನ್ನ, ಯು.ಕೆ ಹಾರೀಸ್, ನಾಸಿರ್, ಅಝೀಜ್,ಮಹಮ್ಮದ್ ಬೊಳ್ಳಾಡಿ,ಮಹಮ್ಮದ್ ಕುಂಞ, ಹನೀಫ್, ರಶೀದ್ ಇಡಿಂಜಿಲ, ಇರ್ಷಾದ್ ಮುಗೇರು, ಆಶಿಕ್ ಸಿ.ಎಚ್,ಹಂಝ ಉಜಿರೋಡಿ, ರಕ್ಷಿತ್ ರೈ ಮುಗೇರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.