ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಧ್ವಜಾರೋಹಣವನ್ನು ಮಾಜಿ ಸೈನಿಕ ಸುಧೀರ ಶೆಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ,ಪ್ರಶಾಂತ್ ಜೈನ್, ವಿಜಯ ಶೆಟ್ಟಿ, ಖಮರುಲ್ ಇಸ್ಲಾಂ ರಝಾನಗರದ ಕಾರ್ಯದರ್ಶಿ ಯೂಸೂಫ್ ನಯಾಝ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾದ ಶಬಾನಾ, ಗೌರವ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಉಪಾಧ್ಯಕ್ಷರಾದ ವಲೇರಿಯನ್ ಲಸ್ರಾದೋ, ನಿಶಿತಾ, ಕ್ರಾಂತಿಕಾರಿ ಜಯರಾಜ್ ಶೆಟ್ಟಿ, ಮುಖ್ಯ ಶಿಕ್ಷಕರಾದ ಜಯಶ್ರೀ ಸಾಲ್ಯಾನ್, ಎಲ್ಸಿ ಲಸ್ರಾದೋ, ಅಬ್ದುಲ್ ಶುಕೂರು, ಪೋಷಕರಾದ ಮುಮ್ತಾಝ್ ಬೇಗಂ , ಸುಝಿಯ, ಶಾಲಾ ನಾಯಕಿ ಸನಾ ಶೆಟ್ಟಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ವಾಮದಪದವು ಪಾಲೆದ ಮರದಿಂದ ಬಸ್ತಿಕೋಡಿಯವರೆಗೆ ಪಥಸಂಚಲನ ನಡೆಯಿತು. ಕವಾಯತು, ವಿವಿಧ ರೀತಿಯ ದೇಶಭಕ್ತಿಗೀತೆ ,ನೃತ್ಯ ಮುಂತಾದವುಗಳು ವಿದ್ಯಾರ್ಥಿಗಳಿಂದ ಪ್ರದರ್ಶನವಾಯಿತು.ಎಲ್ಲರನ್ನೂ ಕಿಶ್ಫಾ ಝಬೀನ್ ಸ್ವಾಗತಿಸಿದರು. ಫಾತಿಮತ್ ಸರ್ವರನ್ನು ವಂದಿಸಿ ಕಾರ್ಯಕ್ರಮ ನಿರೂಪಣೆಗೈದರು.