ಪುತ್ತೂರು: ಮೌಲಾನಾ ಆಝಾದ್ ಮಾದರಿ ಶಾಲೆ ಮತ್ತು ಪದವಿಪೂರ್ವ ಕಾಲೇಜು,(ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ) ಪುದು, ಸುಜೀರ್, ಫರಂಗಿಪೇಟೆ ಇಲ್ಲಿ 79ನೇ ಸ್ವಾತಂತ್ರ್ಯ ದಿನ ಬಹಳ ಅದ್ದೂರಿಯಾಗಿ ನಡೆಸಲಾಯಿತು.
ಧ್ವಜಾರೋಹಣವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉಮರ್ ಫಾರೂಕ್ ನೆರವೇರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿ ಮುಂದಿನ ದಿನಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳು ಆರಂಭವಾಗುವ ಭರವಸೆ ನೀಡಿದರು.

ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ರಶೀದ , ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಮ್ಲಾನ್, ಶಾಲಾ ಪ್ರಾಶುಂಪಾಲರಾದ ಫಾರೂಕ್, ಸಿಬ್ಬಂದಿ ಅಬ್ದುಲ್ ಮಜೀದ್,ಶಿಕ್ಷಕಿಯರಾದ ರೇಖಾ ಕೆ, ಹಲೀಮತ್ ರಶೀದ, ಪ್ರತೀಕ್ಷಾ ಎಚ್, ಭಾಗ್ಯಶ್ರೀ, ರಝಿಯಾ ಎಸ್. ಪಿ, ಅಝ್ಮಿಯ, ರಝ್ವೀನಾ, ಆಯಿಷಾ ಇಮ್ನಾಝ್, ನಿಧಾ ಫಾತಿಮ ,ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ದೇಶಭಕ್ತಿ ಗೀತೆ ನೃತ್ಯ ಪ್ರದರ್ಶನವಾಯಿತು. ಶಿಕ್ಷಕಿ ರಬಿಯ ಅತಿಥಿಗಳನ್ನು ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು