ಕೆಮ್ಮಾಯಿ ಸರಕಾರಿ ಉನ್ನತ ಹಿರಿಯ ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಆ.15ರಂದು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಆನೆ ಮಜಲು ಕುಳುರು ಶ್ರೀಕೃಷ್ಣ ಭಟ್ ಇವರು ಧ್ವಜಾರೋಹಣ ಮಾಡಿ ಶುಭಹಾರೈಸಿದರು.

ನಗರಸಭಾ ಅಧ್ಯಕ್ಷರಾದ ಲೀಲಾವತಿ ಇವರು ಹಿತನುಡಿಗಳನ್ನಾಡಿ ಶುಭಕೋರಿದರು. ಮಾಜಿ ಪುರಸಭಾ ಸದಸ್ಯರಾದ ಉದಯ ಆಚಾರ್ಯ ಹಾಗೂ ಎಸ್. ಡಿ.ಎಂ.ಸಿ ಸದಸ್ಯರಾದ ಅಝೀಝ್ ಇವರು ಸ್ವಾತಂತ್ರ್ಯವನ್ನು ಉಳಿಸಿ ದೇಶದ ಅಭಿವೃದ್ಧಿಗೆ ಒಗ್ಗಟ್ಟಾಗಿ ದುಡಿಯಬೇಕು ಎಂದು ಕರೆ ನೀಡಿದರು.

ಶಾಲೆಯ LKG ಯಿಂದ 8 ನೇ ತರಗತಿಯ ಎಲ್ಲಾವಿದ್ಯಾರ್ಥಿಗಳು ಸಾಮೂಹಿಕ ಕವಾಯತು ನೃತ್ಯ ಪದರ್ಶಿಸಿದರು. ಶಾಲಾ SDMC ಉಪಾಧ್ಯಕ್ಷರಾದ ರಹಮತ್ ಮತ್ತು ಸದಸ್ಯರು ಹಾಜರಿದ್ದರು. ಶಾಲಾ ಮಕ್ಕಳ ಪೋಷಕರು ಹಿರಿಯ ವಿದ್ಯಾರ್ಥಿಗಳು ಕೃಷ್ಣನಗರ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರು ಸದಸ್ಯರುವಿದ್ಯಾರ್ಥಿಗಳುಕೃಷ್ಣನಗರ ಅಂಗನವಾಡಿ ಮಕ್ಕಳು ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು ಕೆಮ್ಮಾಯಿಕೃಷ್ಣನಗರ ಪರಿಸರದ ವಿದ್ಯಾಭಿಮಾನಿಗಳು ದೇಶಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಊರಿನ ಅತಿಥಿ ಗಣ್ಯರು ಉಪಸ್ಥಿತರಿದ್ದು ಮಕ್ಕಳಿಗೆ ಹಲವು ರೀತಿಯ ಸಿಹಿತಿಂಡಿಗಳನ್ನು ನೀಡಿ ಸಹಕರಿಸಿದರು. ಶಾಲಾ ಮುಖ್ಯ ಗುರುಮರಿಯಮ್ಮ. ಪಿ.ಎಸ್ ಸರ್ವರನ್ನು ಸ್ವಾಗತಿಸಿದರು. ದೈ.ಶಿ.ಶಿ ಕುಸುಮಾವತಿ ನಿರೂಪಿಸಿದರು. ಶಿಕ್ಷಕರಾದ ಶ್ರುತಿ ಯು ಇವರು ವಂದಿಸಿದರು. ಶಿಕ್ಷಕಿಯರಾದ ಶೇಷಮ್ಮನಾಗವೇಣಿ ಗಾಯತ್ರಿ ಯಶಸ್ವಿನಿ ಅಕ್ಷಯಾ ಮತ್ತು ದಿವ್ಯಾ ಇವರು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here