ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘ, ರಾಮಕ್ಷತ್ರೀಯ ಮಹಿಳಾ ಸಂಘ, ಶ್ರೀರಾಮ ಭಜನಾ ಮಂದಿರ ಕೆಮ್ಮಿಂಜೆ ಹಾಗೂ ಶ್ರೀ ರಾಮಕ್ಷತ್ರಿಯ ಯುವ ವೃಂದ ಇದರ ಆಶ್ರಯದಲ್ಲಿ ರಾಮಕ್ಷತ್ರೀಯ ಯುವ ವೃಂದ ಆಯೋಜನೆಯ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆ.17ರಂದು ಕೆಮ್ಮಿಂಜೆ ಅತ್ತಾಳ ಗದ್ದೆಯಲ್ಲಿ ನಡೆಯಲಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಕುದುರುಮನೆ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ರಾಮಕ್ಷತ್ರೀಯ ಯುವ ವೃಂದದ ಅಧ್ಯಕ್ಷ ಅನೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾವೀರ ಆಸ್ಪತ್ರೆಯ ಡಾ.ಚಿಂತನ್ ರಾವ್, ಸರಕಾರಿ ಆಸ್ಪತೆ ಡಾ.ಸಂಕೇಶತ್ ರಾವ್, ಡಾ.ಸಿಂಚನಾ, ರಾಮಕ್ಷತ್ರೀಯ ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾ ನವೀನ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಂತರ ಸಮಾಜ ಬಾಂಧವರಿಗೆ ವಿವಿಧ ಮನರಂಜನಾತ್ಮಕ ಕ್ರೀಡೆಗಳು ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಮಕ್ಷತ್ರೀಯ ಯುವ ವೃಂದದ ಅಧ್ಯಕ್ಷ ಅನೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋ ಸಂಸ್ಥೆ ನಿವೃತ್ತ ಉದ್ಯೋಗಿ ಸುದೇಶ್ ರಾವ್, ಉದ್ಯಮಿ ಶಶಿಧರ ಅತ್ತಾಳ, ನಗರ ಸಭಾ ಸದಸ್ಯೆ ಮಮತಾ ರಂಜನ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ರಾಮಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ಯುವ ವೃಂದದ ಅಧ್ಯಕ್ಷ ಅನೀನ್ ಕುಮಾರ್ ಹಾಗೂ ಕಾರ್ಯದರ್ಶಿ ಕಾರ್ತಿಕ್ ಆಲಂಕಾರು ತಿಳಿಸಿದ್ದಾರೆ.