ಪುತ್ತೂರು: ಪರ್ಪುoಜ ಬದ್ರಿಯ ಜುಮಾ ಮಸೀದಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷ ಅಬ್ದುಲ್ ನವಾಝ್ ನೆರವೇರಿಸಿದರು.
ಮಸೀದಿಯ ಖತೀಬ್ ರಫೀಕ್ ಫೈಝಿ ಸಂದೇಶ ಭಾಷಣಗೈದರು. ಸಹ ಅಧ್ಯಾಪಕ ಅಬ್ದುಲ್ ಖಾದರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಮದರಸ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಹoಝ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ, ಹನೀಫ್ ಭಾರತ್, ಶರೀಫ್ ಹಾಜಿ ಉಪಸ್ಥಿತರಿದ್ದರು. ಯoಗ್ಮೆನ್ಸ್ ಪ್ರಮುಖರು, ಜಮಾಅತ್ ಬಾಂಧವರು ಹಾಗೂ ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಝೀರ್ ಪರ್ಪುoಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.