ಪುತ್ತೂರು: ಸವಣೂರು ಗ್ರಾಮದ ಪೆರಿಯಡ್ಕ ಅಂಗನವಾಡಿ ಕೇಂದ್ರದಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಪ್ರೇಮ ಕುಕ್ಕಾಜೆ ಇವರಿಗೆ ಬಾಲ ವಿಕಾಸ ಸಮಿತಿ , ಪೋಷಕರು ಮತ್ತು ಸ್ತ್ರೀ ಶಕ್ತಿ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶುಭಶಂಕರಿ ಧ್ವಜಾರೋಹಣಗೈದರು. ಗ್ರಾ.ಪಂ. ಸದಸ್ಯರುಗಳಾದ ರಫೀಕ್ ಎ.ಎಂ .ಅಬ್ದುಲ್ ರಜಾಕ್ ಕೆನರಾ, ದ.ಕ. ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ, ಯುವಕ ಮಂಡಲದ ಕಾರ್ಯದರ್ಶಿ ರಾಜೇಶ್ ಇಡ್ಯಾಡಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ, ಆದಿ ಶಕ್ತಿ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಕುಕ್ಕಾಜೆ , ಸಂಘ – ಸಂಸ್ಥೆ ಪ್ರತಿನಿಧಿ ಶ್ರೀಧರ್ , ಕೃಷಿ ಉದ್ಯಮಿ ಉಮ್ಮರಬ್ಬ ಮುಲಾರ್, ಬಾ.ವಿ.ಸಮಿತಿಯ ಸದಸ್ಯರು , ಪೋಷಕರು , ಸ್ತ್ರೀ ಶಕ್ತಿ ಸಂಘದ ಸದಸ್ಯರು , ಊರಿನವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್‍ಯಕರ್ತೆ ಕಾವ್ಯ ಸ್ವಾಗತಿಸಿ ಜಯಂತಿ ಪೆರಿಯಡ್ಕ ವಂದಿಸಿದರು.