ಒಡಿಯೂರು ಸಂಸ್ಥಾನದಲ್ಲಿ ಮುದ್ದು ಕೃಷ್ಣ ಏಸ ಪಂತೊ, ಆಟಿದ ಆಯನ ಕಾರ್ಯಕ್ರಮಕ್ಕೆ ಚಾಲನೆ

0

ಮರೆಯಾಗುತ್ತಿರುವ ಹಿರಿಯರ ಆದರ್ಶಗಳನ್ನು ಉಳಿಸುವ ಕೆಲಸವಾಗಬೇಕು: ಒಡಿಯೂರು ಶ್ರೀ

ವಿಟ್ಲ: ಭಾರತ ದೇಶದ ಮೌಲ್ಯ ರಾಮ – ಕೃಷ್ಣ ನ ಆದರ್ಶ.ಮಕ್ಕಳು ಅವರ ಆದರ್ಶವನ್ನು ಪಾಲಿಸಬೇಕು. ಮರೆಯಾಗುತ್ತಿರುವ ಹಿರಿಯರ ಆದರ್ಶಗಳನ್ನು ಉಳಿಸುವ ಕೆಲಸವಾಗಬೇಕು. ಬದುಕು ನಿಂತ ನೀರಾಗಬಾರದು. ಸಂಸ್ಕೃತಿಯ ಉಳಿವಿಗೆ ಭಾಷೆ ಉಳಿಯಬೇಕು. ನಮ್ಮ ಭಾಷೆಯನ್ನು ಉಳಿಸುವ ಜೊತೆಗೆ ಇತರ ಭಾಷೆಯನ್ನು ಪ್ರೀತಿಸಬೇಕು. ಅಳಿಯುತ್ತಿರುವ ವಿಚಾರವನ್ನು ಉಳಿಸುವ ಕೆಲಸವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಸಂಸ್ಥಾನದ ರಾಜಾಂಗಣದಲ್ಲಿ ಆ.15ರಂದು ನಡೆದ ಮುದ್ದು ಕೃಷ್ಣ ಏಸ ಪಂತೊ ಹಾಗೂ ಆಟಿದ ಆಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ‌ ನೀಡಿದರು‌.

ಕಲ್ಮಶವಿಲ್ಲದ ವ್ಯಕ್ತಿತ್ವ ಮಕ್ಕಳದ್ದು. ಇದು ಸ್ಪರ್ಧೆ ಅಲ್ಲ ಪ್ರದರ್ಶನ ಮಾತ್ರ. ಆಟಿ ಎಂದರೆ ಕಷ್ಟದ ತಿಂಗಳು. ನಮ್ಮ ತುಳುನಾಡಿತ ಆಹಾರ ಪದ್ಧತಿಯನ್ನು ಉಳಿಸುವ ಕೆಲಸವಾಗಬೇಕು. ಕೃಷ್ಣ ಆಕರ್ಷಣೆಯ ದೇವರು. ಕೃಷ್ಣ ನಲ್ಲಿರುವ ಸೆಳೆತ ಅಪಾರವಾದುದು. ಯಾಂತ್ರಿಕ ಬದುಕಿನತ್ತ ನಮ್ಮ ಸೆಳೆತ ಹೆಚ್ಚಾಗುತ್ತಿದೆ. ನಮ್ಮ‌ಬದುಕಿನ ಗುಟ್ಟು ತಿಳಿದು ಬದುಕುವ ಅಗತ್ಯತೆ ಇದೆ. ಆಧ್ಯಾತ್ಮವನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು ಎಂದರು.

ಸಾಧ್ವೀ ಶ್ರೀ ಮಾತಾನಂದಮಯೀ, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ, ಮುಖ್ಯೋಪಾದ್ಯಾಯಿನಿ ರೇಣುಕಾ ಎಸ್. ರೈ, ಒಡಿಯೂರು ತುಳುಕೂಟದ ಸದಸ್ಯರಾದ ಬಾಲಕೃಷ್ಣ ಮೇಲಾಂಟ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಆಟಿ ತಿನಸುಗಳ ಸ್ಪರ್ಧೆಯಲ್ಲಿ ವಿಜೇತರಾದವರಿದೆ ಬಹುಮಾನ ವಿತರಿಸಲಾಯಿತು‌. ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ‌ಗೌರವಿಸಲಾಯಿತು.

ಒಡಿಯೂರು ತುಳುಕೂಟದ ಅಧ್ಯಕ್ಷರಾದ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ಮನ್ವಿತ್ ವಂದಿಸಿದರು.

LEAVE A REPLY

Please enter your comment!
Please enter your name here