ಪುತ್ತೂರು: ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಚಿತ್ರ ಪ್ರಕಾಶ್ ಗೌಡ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಒಳಮೊಗ್ರು ಪಂಚಾಯಿತ್ ನ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಂಚಾಯತ್ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಕೆಪಿಎಸ್ನ ಕಾರ್ಯಾಧ್ಯಕ್ಷ ರಕ್ಷಿತ್ ರೈ, ಕೆಪಿಎಸ್ ಶಾಲಾ ಎಸ್ಡಿಎಂಸಿ ಸದಸ್ಯ ಅಶೋಕ್ ಪೂಜಾರಿ ಬೊಳ್ಳಾಡಿ, ರಜಾಕ್, ಕೆಪಿಎಸ್ ಶಾಲಾ ಪ್ರಭಾರ ಮುಖ್ಯಗುರು ಜುಲಿಯಾನ ಮೊರಸ್, ಸಹ ಶಿಕ್ಷಕಿ ಪ್ರಶಾಂತಿ, ಮಕ್ಕಳ ಪೋಷಕರು ಸ್ತ್ರೀಶಕ್ತಿ ಸದಸ್ಯರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಸ್ವಾಗತಿಸಿದರು. ಸಹಾಯಕಿ ರಾಜೀವಿ ಸಹಕರಿಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘ ಕುಂಬ್ರ, ಒಳಮೊಗ್ರು ಪಂಚಾಯತ್, ಭವ್ಯ ರೈ ಕುರಿಕ್ಕಾರ, ಸುಜಾತ ಸಂತೋಷ್ ರೈ ಕುಂಬ್ರ, ಚಿತ್ರ ಪ್ರಕಾಶ್ ಗೌಡ ಊರ್ವ, ಕಾವ್ಯ ಸತೀಶ್ ಗೌಡ, ಸಾನ್ವಿರೈ ಕುರಿಯ, ಸಿಹಿ ತಿಂಡಿ ನೀಡಿ ಸಹಕರಿಸಿದರು.