ಕಡಬ: ಇಲ್ಲಿನ ಪಟ್ಟಣ ಪಂಚಾಯತ್ನ 13 ವಾರ್ಡುಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಆ.16ರಂದು ಕಡಬ ತಾಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು, ಮಸ್ಟರಿಂಗ್ ಕಾರ್ಯ ನಡೆಯಿತು.

ಪ್ರತಿ ವಾರ್ಡಿನ ಮತಗಟ್ಟೆಯಲ್ಲಿ ಪಿ.ಆರ್.ಒ. ಮೂರು ಮಂದಿ ಸಿಬ್ಬಂದಿಗಳು ಹಾಗೂ ಓರ್ವ ಡಿ ಗ್ರೂಫ್ ನೌಕರ ಇರುತ್ತಾರೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಎಲ್ಲಾ ಮತಗಟ್ಟೆ ಸಿಬ್ಬಂದಿಗಳು ಹಾಜರಿದ್ದು, ಮಸ್ಟರಿಂಗ್ ಕಾರ್ಯ ನಡೆಯಿತು. ಇಂದು ಸಂಜೆಯ ವೇಳೆಗೆ ಮತಯಂತ್ರ ಹಾಗೂ ಸಿಬ್ಬಂದಿಗಳು ಮತಗಟ್ಟೆಗಳಿಗೆ ತೆರಳಲಿದ್ದಾರೆ.
ತಹಶೀಲ್ದಾರ್ ಪ್ರಭಾಕರ ಖಜೂರೆ, ಉಪ ತಹಶೀಲ್ದಾರ್(ಚುನಾವಣಾ ಶಾಖೆ) ಶಾಯಿದ್ದುಲ್ಲಾ ಖಾನ್, ಚುನಾವಣಾಧಿಕಾರಿಗಳಾದ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್, ಜಿ.ಪಂ. ಇಂಜಿನಿಯರ್ ಸಂಗಪ್ಪ ಹುಕ್ಕೇರಿ,ಪಟ್ಟಣ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ಎಂ.ಡಿ. ಮೊದಲಾದವರು ಉಪಸ್ಥಿತರಿದ್ದರು. ಕಡಬ ಪೋಲಿಸರು ಬಂದೋಬಸ್ತು ನಿರತರಾಗಿದ್ದಾರೆ.