ನೆಲ್ಯಾಡಿ: ಇಲ್ಲಿನ ಅಲ್ ಬದ್ರಿಯಾ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ನಾಝೀಂ ಸಾಹೇಬ್ ಧ್ವಜಾರೋಹಣ ನೆರವೇರಿಸಿದರು.
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಬ್ರಾಹಿಂ ಸಖಾಫಿ ದುವಾ ನೆರೆವೇರಿಸಿದರು. ಉಪ್ಪಿನಂಗಡಿ ಎ೧ ಸುಪಾರಿ ಸಂಘದ ಅಶ್ರಫ್, ರಕ್ಷಣಾ ವೇದಿಕೆಯ ಅಬ್ದುಲ್ ಖಾದರ್, ಬಿಜೆಎಂ ಅಧ್ಯಕ್ಷ ಎನ್.ಎಸ್.ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಇಲ್ಯಾಸ್, ಸದರ್ ಉಸ್ತಾದ್ ಇಸ್ಮಾಯಿಲ್ ಸಹದಿ, ಆಸೀಫ್ ಮಹಿನಿ, ಅಬ್ಬುಲ್ ರಝಾಕ್, ರಫೀಕ್ ಅಲಂಪಾಡಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಮಕ್ಕಳಿಂದ ದೇಶ ಭಕ್ತಿಗೀತೆ ನಡೆಯಿತು. ಬಹುಮಾನ ವಿತರಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ. ಸ್ವಾಗತಿಸಿದರು. ಮುಖ್ಯಶಿಕ್ಷಕಿ ಸೀಮಾ ಡೆನ್ನೀಸ್ ವಂದಿಸಿದರು.