ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಕಿಂಡೋವು ನೆರವೇರಿಸಿದರು.
ನಿವೃತ್ತ ಯೋಧ ವಿಶ್ವನಾಥ ಮಾಯಿತ್ತಾಲ್ ಹಾಗೂ ಸಂಘದ ನಿಕಟಪೂರ್ವಾಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಸ್ವಾತಂತ್ರ್ಯೋವದ ಸಂದೇಶ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಬೊಳ್ಳಾವು, ನಿರ್ದೇಶಕರಾದ ದೇರಣ್ಣ ಗೌಡ ಓಮಂದೂರು, ಸೇಸಪ್ಪ ಗೌಡ ಬೊಳ್ಳಾವು, ಬಾಲಚಂದ್ರ ಕೊರಂಬಾಡಿ, ವಸಂತ ಕುಂಟಿನಿ, ಸಂಘದ ಕಾರ್ಯದರ್ಶಿ ವಿದ್ಯಾ ಹೊಸಮನೆ, ಹಾಲು ಪರೀಕ್ಷಕ ಸುರೇಶ್ ಗೌಂಡತ್ತಿಗೆ, ಸಿಬ್ಬಂದಿ ವಿಶಾಂತ್, ಚೆನ್ನಯ ಮತ್ತಿತರರು ಉಪಸ್ಥಿತರಿದ್ದರು.