ಹಿರೇಬಂಡಾಡಿ: ಸರಕಾರಿ ಉ.ಹಿ.ಪ್ರಾ.ಶಾಲೆ ಹಿರೇಬಂಡಾಡಿ ಇಲ್ಲಿ ಆಟಿಡೊಂಜಿ ದಿನ ’ಡೆನ್ನಾನ’ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮೇಶ ಉದ್ಘಾಟಿಸಿ ಶುಭಹಾರೈಸಿದರು. ಮಧ್ಯಾಹ್ನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮೇಶ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಆಗಮಿಸಿದ ವಿನೋದ್ ಬೊಂಟ್ರಪಾಲ್ರವರು ಆಟಿ ತಿಂಗಳ ವಿಶೇಷ ಹಾಗೂ ಅದರ ಆಚರಣೆಯ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಭಾರ ಮುಖ್ಯಗುರು ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕಿ ದೇಜಮ್ಮ, ಶಾಂತಿನಗರ ಶಾಲೆಯ ಶಿಕ್ಷಕಿ ತಿಲಕ ಹಿರೇಬಂಡಾಡಿ, ಶಾಲಾ ನಾಯಕಿ ಜ್ಞಾನವಿ, ಎಸ್ಡಿಎಂಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸುಮಾರು 23 ವರ್ಷ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಯಮುನಾ ಹಾಗೂ ಗುಲಾಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಶಿಕ್ಷಕಿ ವಾರಿಜ ಸ್ವಾಗತಿಸಿ, ಎಸ್ಡಿಎಂಸಿ ಸದಸ್ಯ ರೋಹಿತ್ ಸರೋಳಿ ವಂದಿಸಿದರು. ಶಿಕ್ಷಕರಾದ ಸವಿತಾ, ರಾಧಿಕಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳೊಂದಿಗೆ ಉಪಾಹಾರ ನೀಡಲಾಯಿತು.