ಶಿವಳ್ಳಿ ಸಂಪದ ವತಿಯಿಂದ ಶ್ರೀಮದ್ಭಾಗವತ ಸಪ್ತಾಹ

0

ಪುತ್ತೂರು: ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರೂ ಶ್ರೀಮದ್ಭಾಗವತವನ್ನು ವರ್ಷಕ್ಕೊಮ್ಮೆಯಾದರೂ ಕೇಳಬೇಕು ಎಂದು ಜಿಎಲ್ ಸಮೂಹ ಸಂಸ್ಥೆಗಳ ಮಾಲಕ ಜಿ.ಎಲ್.ಬಲರಾಮ ಆಚಾರ್ಯ ಹೇಳಿದರು. ಶಿವಳ್ಳಿ ಸಂಪದ ಬೊಳುವಾರು ವಲಯ ವತಿಯಿಂದ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಆ.16 ರಿಂದ ಆ.22ರ ವರೆಗೆ ಆಯೋಜಿಸಿರುವ ಶ್ರೀಮದ್ಭಾಗವತ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.


ಇಂತಹ ಸಪ್ತಾಹ ಕಾರ್ಯಕ್ರಮಗಳ ಉದ್ಘಾಟನೆಗೆ ಸಾಮಾನ್ಯವಾಗಿ ಜನರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಈ ಸಪ್ತಾಹ ಉದ್ಘಾಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಇದು ಅವರಲ್ಲಿನ ಆಸಕ್ತಿಯನ್ನು ತೋರಿಸುತ್ತದೆ. ಇಂತಹ ಉತ್ತಮವಾದ ಕಾರ್ಯಕ್ರಮಗಳು ಆಧ್ಯಾತ್ಮಿಕ ಚಿಂತನೆಗೆ ವೇಗ ನೀಡಲಿದೆ ಎಂದರು.


ಪ್ರಗತಿ ಆಸ್ಪತ್ರೆಯ ಶ್ರೀಪತಿ ರಾವ್ ಮಾತನಾಡಿ, ಈ ಸಪ್ತಾಹದ ಪ್ರಯೋಜನಗಳನ್ನು ಪಡೆದು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕು. ಈ ಸಪ್ತಾಹದ ನಂತರವೂ ಕೃಷ್ಣನ ಜಪ ಮುಂದುವರಿಯಬೇಕು ಎಂದರಲ್ಲದೆ, ತಾಳ್ಮೆ, ಶ್ರದ್ಧೆ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದು ಕಥಾರೂಪದಲ್ಲಿ ವಿವರಿಸಿದರು.


ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ, ದೇವರ ಬಗ್ಗೆ ಅಪಾರ ಜ್ಞಾನ ಪಡೆದ ಡಾ.ಬೆ.ನಾ.ವಿಜಯೀಂದ್ರ ಆಚಾರ್ಯ ಮೈಸೂರುರವರು ಈ ಸಪ್ತಾಹ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಇತರ ಕಡೆಗಳಲ್ಲಿಯೂ ನಡೆಸಬೇಕಿದೆ. ಈ ರೀತಿಯ ಕಾರ್ಯಕ್ರಮಗಳು ಆದಾಗ ಮೋಕ್ಷದೆಡೆಗೆ ಸಾಗಬಹುದು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಜ್ಯೋತಿಷ್ಯ ವೇ.ಮೂ. ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಮಾತನಾಡಿ ಭಗವಾನ್ ಶ್ರೀ ಕೃಷ್ಣ ಜನ್ಮದಿನದಂದೇ ಅವನು ಬೋಧಿಸಿದ ಶ್ರೀಮದ್ಭಾಗವತದ ಸಪ್ತಾಹವನ್ನು ಉದ್ಘಾಟಿಸಲಾಗಿದೆ ಎಂದರು.


ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಿಳಾ ಸಂಘದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞೆ, ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸುದೀಂದ್ರ ಕುದ್ದಣ್ಣಾಯ ಉಪಸ್ಥಿತರಿದ್ದರು. ಅಭಿಜ್ಞಾ ರಾವ್ ದಾಳಿಂಬ ಪ್ರಾರ್ಥಿಸಿದರು. ಶಿವಳ್ಳಿ ಸಂಪದ ಬೊಳುವಾರು ವಲಯದ ಅಧ್ಯಕ್ಷ ಗಣೇಶ್ ಕೆದಿಲಾಯ ಸ್ವಾಗತಿಸಿ, ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here