ನೆಲ್ಯಾಡಿ: ಕೊಲ್ಯೊಟ್ಟು ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ನೆರವೇರಿಸಿದರು.
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ಮೇನೇಜರ್ ರತ್ನಾಕರ ಬಂಟ್ರಿಯಾಲ್, ನೆಲ್ಯಾಡಿ ಮಹಿಳಾ ಜೇಸಿಐ ಅಧ್ಯಕ್ಷೆ ಪ್ರವೀಣಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಸ್ತ್ರೀಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಗೀತಾ, ಮಕ್ಕಳ ಪೋಷಕ ಮೋನಪ್ಪ ಗೌಡ, ಪೂರ್ವ ವಿದ್ಯಾರ್ಥಿ ಕೇಶವ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು, ಮಕ್ಕಳ ತಾಯಂದಿರು, ಪೂರ್ವವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಮಕ್ಕಳಿಂದ ರಾಷ್ಟ್ರನಾಯಕರ ಹಾಗೂ ಮುದ್ದುಕೃಷ್ಣ ಛದ್ಮವೇಷ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರೋಹಿತ್ ಶೆಟ್ಟಿ ಬಹುಮಾನ ಪ್ರಾಯೋಜಿಸಿದರು. ನೆಲ್ಯಾಡಿ ಗ್ರಾ.ಪಂ., ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಹಿರಿಯ ವಿದ್ಯಾರ್ಥಿ ರವೀಂದ್ರ ಆರ್., ಮಹಿಳಾ ಜೇಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.

ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ;
ನೂತನ ಅಧ್ಯಕ್ಷರಾಗಿ ರವೀಂದ್ರ ಆರ್. ಉಪಾಧ್ಯಕ್ಷರಾಗಿ ಕೇಶವ ಕುಂಬಾರ, ಕಾರ್ಯದರ್ಶಿಯಾಗಿ ಪ್ರತಿಭಾ ಶೆಟ್ಟಿ, ಖಜಾಂಜಿಯಾಗಿ ವಸಂತ ಕುಂಬಾರ, ಪದಾಧಿಕಾರಿಗಳಾಗಿ ಚಂದ್ರ, ಪವಿತ್ರ ಆಯ್ಕೆಯಾದರು. ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಸುಜಾತ ವಂದಿಸಿದರು. ಆಟಿ ತಿಂಗಳ ತಿಂಡಿ,ತಿನಿಸು ತಯಾರಿಸಲಾಯಿತು.