ವಿಜಯ ಸಾಮ್ರಾಟ್ ಸಾರಥ್ಯದಲ್ಲಿ ಪುತ್ತೂರುದ ಪಿಲಿಗೊಬ್ಬು- ಸೀಸನ್ 3, ಫುಡ್ ಫೆಸ್ಟ್ : ಆಮಂತ್ರಣ ಪತ್ರ ಬಿಡುಗಡೆ

0

ತುಪ್ಪ ದೀಪ ಬೆಳಗಿಸುವ ಮೂಲಕ ಆಮಂತ್ರಣ ಪತ್ರ ಬಿಡುಗಡೆ
ದೇವಳದ ಸತ್ಯಧರ್ಮ ನಡೆಯಲ್ಲಿ ವೇ ಮೂ ವಸಂತ ಕೆದಿಲಾಯರಿಂದ ಪ್ರಾರ್ಥನೆ

ಪುತ್ತೂರು: ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಜನಪರ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಮಾಡುತ್ತಾ ಬಂದಿರುವ ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷ ಹಾಗು ಗೌರವಾಧ್ಯಕ್ಷರ ಸಹಜ್ ರೈ ಬಳಜ್ಜ ಅವರ ಮುಂದಾಳುತ್ವದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ನಾಡಿನಾದ್ಯಂತ ಜನಮನಗೆದ್ದ ಪುತ್ತೂರುದ ಪಿಲಿಗೊಬ್ಬು ಈ ಬಾರಿ 3ನೇ ವರ್ಷದ ಪುತ್ತೂರುದ ಪಿಲಿಗೊಬ್ಬು ಸೀಸನ್ 3 ಮತ್ತು ಫುಡ್ ಫೆಸ್ಟ್ ಸೆ.28ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರವನ್ನು ಆ.17ರಂದು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.


ವಿಜಯ ಸಾಮ್ರಾಟ್ ಇದರ ಸ್ಥಾಪಕ ಅಧ್ಯಕ್ಷ ಮತ್ತು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಅವರ ತಂದೆ ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾಗಿರುವ ಎಸ್.ಬಿ.ಜಯರಾಮ ರೈ ಬಳಜ್ಜ ಅವರೊಂದಿಗೆ ದೇವಳದಲ್ಲಿ ತುಪ್ಪದ ದೀಪ ಬೆಳಗಿಸಿದರು. ಬಳಿಕ ಶ್ರೀ ದೇವಳದ ಸತ್ಯಧರ್ಮ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮ ವರ್ಷಂಪ್ರತಿ ಯಶಸ್ವಿಯನ್ನು ಕಾಣುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು. ಬಳಿಕ ದೇವಳದ ಹೋರಾಂಗಣದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, 3ನೇ ವರ್ಷದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವ ಯಶಸ್ವಿಯಾಗಿ ಮೂಡಿಬರುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರಿಂದ ತುಪ್ಪದ ದೀಪವನ್ನು ಬೆಳಗಿಸಿದ್ದೇವೆ. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ನಾನು ಮತ್ತು ವೈಯುಕ್ತಿಕ ನೆಲೆಯಲ್ಲೂ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ ಎಂದರು.


ನಮ್ಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಎಲ್ಲರ ಸಹಕಾರ, ಆಶೀರ್ವಾದವಿರಲಿ:
ವಿಜಯ ಸಾಮ್ರಾಟ್ ಇದರ ಸ್ಥಾಪಕ ಅಧ್ಯಕ್ಷ ಮತ್ತು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಅವರು ಮಾತನಾಡಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಹಾಗು ವಿಜಯಸಾಮ್ರಾಟ್‌ನ ಸದಸ್ಯರ ಉಪಸ್ಥಿಯಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್ 3 ಆಮಂತ್ರಣ ಬಿಡುಗಡೆ ಮಾಡಲಾಗಿದೆ. 202ರಲ್ಲಿ ಇದನ್ನು ಆರಂಭಿಸಿ ಸೀಸನ್ 1 ಮತ್ತು 2 ಅತ್ಯಂತ ಯಶಸ್ವಿಯಾಗಿ ನಡೆದಿದೆ. ತುಳುನಾಡಿನ ಧಾರ್ಮಿಕ ಹಿನ್ನೆಲೆಯುಳ್ಳ ಹುಲಿವೇಷ ಕುಣಿತವು ಜನಪದಕಲೆಯಾಗಿದ್ದು ಅದನ್ನು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮಂಗಳೂರು ಕಡೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಪುತ್ತೂರಿನಲ್ಲೂ ಮಾಡಬೇಕೆಂಬ ದ್ಯೇಯದೋದ್ದೇಶವಿಟ್ಟುಕೊಂಡು ಆರಂಭಿಸಿದ್ದೆವು. ಈ ಭಾರಿ ಸೀಸನ್ 3 ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ, ಆಶೀರ್ವಾದವಿರಲಿ. ಇದರ ಜೊತೆಗೆ ಆ ದಿನ ಫುಡ್ ಫೆಸ್ಟ್ ಕೂಡಾ ಇರಲಿದೆ. ಸುಮಾರು 50ಕ್ಕಿಂತ ಹೆಚ್ಚಿನ ಸ್ಟಾಲ್‌ಗಳು ವಿಶೇಷವಾಗಿ ಇರಲಿದೆ ಎಂದರು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಪುತ್ತೂರುದ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷ ಶಂಕರ್ ಭಟ್ ಈಶಾನ್ಯ, ಉಪಾಧ್ಯಕ್ಷ ರತನ್ ರೈ ಕುಂಬ್ರ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ಉದ್ಯಮಿ ಅಶ್ವಿನ್‌ ರೈ, ಸುರೇಶ್ ಪಿದಪಟ್ಲ, ದಿನೇಶ್ ವಾಸುಕಿ, ಪವನ್ ಶೆಟ್ಟಿ ಕಂಬಳತ್ತಡ್ಡ, ಜೊತೆ ಕಾರ್ಯದರ್ಶಿಗಳಾದ ಧನುಷ್ ಹೊಸಮನೆ, ಆನಂದ ತೆಂಕಿಲ, ರಾಜೇಶ್ ರೈ ಪರ್ಪುಂಜ, ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ, ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ರೈ ಕರ್ನೂರ್, ನಿತೇಶ್ ನೆಲಪ್ಪಾಲ್, ನವೀನ್ ಗೌಡ, ಮೋಹನ್ ಕಬಕ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ, ಪ್ರದೀಪ್ ರೈ ಮಾಡಾವು, ಸಚಿನ್ ಶೆಟ್ಟಿ ಪಟ್ಟೆ, ಚರಣ್ ಕುಲಾಲ್, ಹರೀಶ್ ಕುಲಾಲ್ ಬೆದ್ರಾಳ, ಗೌತಮ್ ಗೌಡ, ಜಗದೀಶ್ ಜಿ.ಆರ್ ನಾಯಕ್, ಪ್ರಜ್ವಲ್ ಎಂ.ಎಸ್, ಭರತ್ ಚನಿಲಾ, ಮಹೇಶ್ ಆಚಾರ್ಯ, ಉಮೇಶ್ ಹಡಿಲ್, ಸುದರ್ಶನ್ ರೈ ನೀರ್ಪಾಡಿ, ಕಿಶನ್ ರೈ, ಅಭಿಷ್ ಕೊಲಕೆಮಾರ್, ಚರಣ್ ರೈ ಮಠ, ನವೀನ್ ಪಡ್ನೂರು, ಹರ್ಷರಾಜ್, ಅಭಿಷೇಕ್ ಯಾದವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here