ನಿಡ್ಪಳ್ಳಿ; ಕೆ.ಪಿ.ಎಸ್ ಕುಂಬ್ರ ಇಲ್ಲಿ ಜರಗಿದ ಪುತ್ತೂರು ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ಬಾಲಕಿಯರಾದ ಸುಪ್ರಿತ, ರಕ್ಷಿತಾ, ಕಾವ್ಯ,ಸ್ವಾತಿ,ಜಸ್ಮಿತ,ಮೋಕ್ಷಿತ, ಸಹನಾ ಮತ್ತು ಪವಿತ್ರ ಇವರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ದೀಪಿಕಾ ಪ್ರೌಢಶಾಲೆ ಮೋಡಂಕಾಪು ಇಲ್ಲಿ ಜರಗುವ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕಯಾಗಿದ್ದಾರೆ.
ಹತ್ತನೆ ತರಗತಿಯ ಸುಪ್ರೀತಾ ಉತ್ತಮ ದಾಳಿಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ತರಬೇತಿ ನೀಡಿರುತ್ತಾರೆ. ತಂಡದ ಮ್ಯಾನೇಜರ್ ಆಗಿ ಶಿಕ್ಷಕಿ ವಿನುತಾ ಬಲ್ಲಾಳ್ ಸಹಕರಿಸಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ್ ತಿಳಿಸಿದ್ದಾರೆ.
