ಪುತ್ತೂರು: ಕರಿಯ ಸ.ಹಿ.ಪ್ರಾ.ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಂ.ಎಸ್ ಧ್ವಜಾರೋಹಣ ನೆರವೇರಿಸಿದರು.
ಅತಿಥಿಗಳಾಗಿ ಆರ್ಯಾಪು ಗ್ರಾ.ಪಂ ಸದಸ್ಯರು ಹಾಗೂ ಶಾಲಾ ಎಸ್‌ಡಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಬೂಡಿಯಾರು ಪುರುಷೋತ್ತಮ ರೈ, ಗ್ರಾ.ಪಂ ಸದಸ್ಯರಾದ ಯಾಕುಬ್ ಕುರಿಯ, ನಾಗೇಶ ಎಂ, ಪ್ರಮುಖರಾದ ಶಿವರಾಮ ಆಳ್ವ ಬಳ್ಳಮಜಲು, ರಾಮಕೃಷ್ಣ ಭಂಡಾರಿ, ರಮೇಶ್ ರೈ ಡಿಂಬ್ರಿ, ಗಣೇಶ್ ರೈ, ಚಂದ್ರಶೇಖರ ರೈ, ಸೂಫಿ ಕುರಿಯ, ಸನತ್ ರೈ ಕುರಿಯ, ಅರುಣ್ ರೈ ಡಿಂಬ್ರಿ, ನಿವೃತ್ತ ಮುಖ್ಯ ಗುರು ಹುಕ್ರ, ಸಮೀರ್ ಶಾಝ್, ಆಸಿಫ್ ಕೆ, ಗೋಪಾಲ ಗೌಡ, ಆಸಿಫ್ ಎ ಆರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಕಮಲ, ಎಸ್‌ಡಿಎಂಸಿ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿದ್ಯಾಭಿಮಾನಿಗಳು, ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿ ನಾಯಕಿ ಇನಾ ಫಾತಿಮಾ ಹಾಗ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಕೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕಿ ದಿವ್ಯ ಜ್ಯೋತಿ ಕೆ ವಂದಿಸಿದರು. ಶಿಕ್ಷಕಿ ಕು.ಕವಿತಾ ಪಿ.ಎನ್, ಶಿಕ್ಷಕಿ ನಳಿನಿ, ಶಿಕ್ಷಕಿ ಕು| ಕಾವ್ಯ ಸಹಕರಿಸಿದರು. ನಂತರ ಬ್ಯಾಂಡ್ ದಳ ಹಾಗೂ ಸೇವಾದಳದೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.