ಸುಳ್ಯಪದವು ಜಂಕ್ಷನ್ ನಲ್ಲಿ ನೂತನ ಬೀರಮೂಲೆ ಆರ್ಕೆಡ್ ನ ಶುಭಾರಂಭ

0

ಸುಳ್ಯಪದವು:ಪಡುವನ್ನೂರು ಗ್ರಾಮದ ಸುಳ್ಯ ಪದವು ಜಂಕ್ಷನ್ (ಶಬರಿನಗರ ) ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ಸಂಕೀರ್ಣಗಳ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವು ಆ. 18ರಂದು ನಡೆಯಿತು.


ಬೀರಮೂಲೆ ಆರ್ಕೆಡ್ ನ್ನು ಪ್ರಗತಿ ಪರ ಕೃಷಿಕರು, ಕುಟುಂಬದ ಹಿರಿಯರಾದ ರಾಮ ಭಟ್ ಬೀರ ಮೂಲೆ ಉದ್ಘಾಟಿಸಿ ಶುಭ ಹಾರೈಸಿದರು.
ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಪುರೋಹಿತ ರಾದ ವೆಂಕಟೇಶ್ ಭಟ್ ಇಂದಾಜೆ ವೈದಿಕ ವಿಧಿ ವಿಧಾನ ನೆರವೇರಿಸಿದರು.ಬೀರಮೂಲೆ ಆರ್ಕೆಡ್ ನ ಮಾಲಕರಾದ ಶ್ರೀಕೃಷ್ಣ ಭಟ್ ಬೀರ ಮೂಲೆ, ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆ ತ್ತಾಯ,ಧರ್ಮದರ್ಶಿ ಶಿವರಾಮ್ ಪಿ, ಪ್ರಮುಖರಾದ ಸುಬ್ರಹ್ಮಣ್ಯ ಭಟ್ ಪಾದೆಗದ್ದೆ, ನಾರಾಯಣ ರೈ ಕುದ್ಕಾಡಿ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡ ಗನ್ನೂರು ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ವೆಂಕಟೇಶ್ ಕನ್ನಡ್ಕ, ಶ್ರೀಮತಿ ಕನ್ನಡ್ಕ, ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ್ ರೈ ಎನ್ ಜಿ, ಬೀರಮೂಲೆ ಕುಟುಂಬದ ಸದಸ್ಯರು,,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here