ಪುತ್ತೂರು: ಇತ್ತೀಚೆಗೆ ನಿಧನರಾದ ಕರಿಂಕ ಕೊಡಂಗೆಮಾರು ಗಿರಿಜ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆಯು ಆ.19ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ನುಡಿ ನಮನ ಸಲ್ಲಿಸಿದ ಕೊಡಾಜೆ ಬಾಲಕೃಷ್ಣ ಆಳ್ವರವರು ಮಾತನಾಡಿ, ಮಕ್ಕಳಿಗೆ ಮಾರ್ಗದರ್ಶಕರಾಗಿದ್ದ ಗಿರಿಜಾರವರು ಸಮಾಜ ಸೇವಕಿಯಾಗಿ ಊರಿನ ಅನೇಕ ಮಂದಿಗೆ ನೆರವಾಗಿದ್ದರು ಎಂದರು. ಮೃತರ ಪತಿ ಉಗ್ಗಪ್ಪ ಶೆಟ್ಟಿ, ಮಕ್ಕಳಾದ ಪ್ರವೀಣ್ ಶೆಟ್ಟಿ, ಅರುಣ್ ಶೆಟ್ಟಿ, ಉಷಾ ರೈ, ಸೌಮ್ಯ ರೈ, ಸೊಸೆಯಂದಿರಾದ ಶಿಲ್ಪ ಶೆಟ್ಟಿ, ಲಾವಣ್ಯ ಶೆಟ್ಟಿ, ಅಳಿಯಂದಿರಾದ ರಮೇಶ್ ರೈ ಮೊಡಪ್ಪಾಡಿ, ಶ್ರೀನಾಥ್ ರೈ ಕೊಡಂಕೇರಿ, ಮೊಮ್ಮಕ್ಕಳು, ಕರಿಂಕ ಕೊಡಂಗೆಮಾರು ಕುಟುಂಬಸ್ಥರು, ಬಂಧುಮಿತ್ರರು, ಗಣ್ಯರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.