ಕೋಡಂಬು ಸುಬ್ಬಯ್ಯ ರೈರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಇತ್ತೀಚೆಗೆ ನಿಧನರಾದ ಕೆಯ್ಯೂರು ಕೋಡಂಬು ನಿವಾಸಿ ಎಸ್.ಬಿ.ಸುಬ್ಬಯ್ಯ ರೈ ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ಆ.20ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಹಾಲ್‌ನಲ್ಲಿ ನಡೆಯಿತು.

ಸುಬ್ಬಯ್ಯ ರೈ ಅವರು ಭಜನೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಜನಾ ಸಂಕೀರ್ತನೆ ನಡೆಸಲಾಯಿತು.


ನುಡಿ ನಮನ ಸಲ್ಲಿಸಿ ಮಾತನಾಡಿದ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಲಕಟ್ಟೆ, ದೈವಭಕ್ತರಾಗಿದ್ದ ಸುಬ್ಬಯ್ಯ ರೈ ಅವರು ನಿರಂತರ ಭಜನೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಮಕ್ಕಳನ್ನೂ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಊರಿನ ಸಮಸ್ತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಇವರು ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದರು. ಇತ್ತೀಚೆಗೆ ಅವರು ನಮ್ಮನ್ನೆಲ್ಲರನ್ನು ಅಗಲಿದ್ದು, ಅವರ ಆತ್ಮ ದೇವರ ಪಾದ ಪದ್ಮದಲ್ಲಿ ಲೀನವಾಗಲಿ ಎಂದು ಪ್ರಾರ್ಥಿಸಿದರು.


ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತರ ಪತ್ನಿ ಉಮಾವತಿ ಎಸ್ ರೈ, ಮಕ್ಕಳಾದ ಜಗನ್ನಾಥ ರೈ, ದೇವಿಕಾ ಶೆಟ್ಟಿ, ಶಿವರಾಮ ರೈ, ಕರುಣಾಕರ ರೈ, ಭಾರತಿ ರೈ, ವಿಜಯ ಶೆಟ್ಟಿ, ಚಂದ್ರಹಾಸ ರೈ, ಸಹೋದರರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಊರಿನ ಅನೇಕ ಗಣ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here