ಪುತ್ತೂರು: ದೃಶ್ಯ ಮೂವೀಸ್ ಅರ್ಪಿಸುವ ಅಜಿತ್ ಬಿಟಿ ನಿರ್ಮಾಣದ ಕೀರ್ತನ್ ಶೆಟ್ಟಿ ಸುಳ್ಯ ಕಥೆ ಹಾಗೂ ನಿರ್ದೇಶನದ ಹೊಸ ಕಿರುಚಿತ್ರ ʼಮಾಹಿʼ ಕಿರುಚಿತ್ರದ ಟೈಟಲ್ ರಿವಿಲ್ ಕಾರ್ಯಕ್ರಮ ಈಶ್ವರಮಂಗಲ ಹನುಮಗಿರಿಯಲ್ಲಿ ನಡೆಯಿತು.
ನವರಸರಾಜ ಭೋಜರಾಜ್ ವಾಮಂಜೂರು ಕಿರುಚಿತ್ರದ ಟೈಟಲ್ ರಿವಿಲ್ ಮಾಡಿದರು. ನನ್ಯ ಅಚ್ಚುತ್ತಾ ಮುಡತ್ತಾಯರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸಿನಿಮಾದ ವಿತರಕರಾದ ಬಾಲಕೃಷ್ಣ ಶೆಟ್ಟಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕರಾದ ರಝಾಕ್ ಪುತ್ತೂರು, ಧರ್ಮಚಾವಡಿ ಚಿತ್ರದ ನಿರ್ಮಾಪಕರಾದ ಜಗದೀಶ್ ಅಮೀನ್ ನಡುಬೈಲು ಮತ್ತು ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ, ತೆನ್ಕಾಯಿ ಮಲೆ ಚಿತ್ರದ ನಿರ್ದೇಶಕರಾದ ರವಿಚಂದ್ರ ರೈ ಮುಂಡೂರು ರವರ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಚಿತ್ರೀಕರಣವು ಕಾವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದು ,ಧರ್ಮ ಚಾವಡಿ ಚಿತ್ರದ ಸಹ ನಿರ್ದೇಶಕ ಕೀರ್ತನ್ ಶೆಟ್ಟಿ ಸುಳ್ಯ ಇವರ ನಿರ್ದೇಶನದಲ್ಲಿ , ಪ್ರಶಾಂತ್ ಶೇಣಿ ಇವರ ಛಾಯಾಗ್ರಹಣದಲ್ಲಿ , ಶ್ರೀನಾಥ್ ಪವರ್ ಇವರ ಸಂಕಲನದಲ್ಲಿ , ಭವಿಷ್ಯತ್ ಇವರ ಹಿನ್ನೆಲೆ ಗಾಯನದಲ್ಲಿ, ಮೂಡಿಬಂದಿದ್ದು ,ಚಿತ್ರದ ಸಹ ಬರಹಗಾರರಾಗಿ ಜೈದೀಪ್ ರೈ , ಸುಪ್ರೀತ ಕೆಎಸ್, ಹಿತ ಶ್ರೀ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಯಶ್ವಿತ್ ಕಾವ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ .
ಚಿತ್ರದ ಮುಖ್ಯ ಭೂಮಿಯಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕರಾದ ದಯಾನಂದರ ಬೆಟ್ಟಂಪಾಡಿ, ಜೈ ದೀಪ್ ರೈ ಕೊರಂಗ,ಸುಪ್ರೀತ ಕೆಎಸ್ , ಸುಷ್ಮ ಕೆಎಸ್, ನಿರಂಜನ್ ರಾವ್, ಪ್ರಮೀತ್ ರಾಜ್ , ಹರ್ಷಿತ್ ಅರ್ಭಟ್ಕ , ಸೌಪರ್ಣಿಕಾ ರೈ, ಹಾಗೂ ಸುಮಾರು 15 ಬಾಲ ಕಲಾವಿದರು ಅಭಿನಯಿಸಿರುತ್ತಾರೆ ಎಂದು ಚಿತ್ರತಂಡ ತಿಳಿಸಿದೆ.