ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ ಆ.20ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಸಂಚಾಲಕ ಪುಷ್ಪರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕೃಷ್ಣಪ್ರಸಾದ್ ಇವರು ವಿಜ್ಞಾನ ಮಾದರಿ ಸ್ಪರ್ಧೆಯ ಪ್ರಾಮುಖ್ಯತೆಯನ್ನು ವಿವರಿಸಿದರು .

ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ 11 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೋಡ್ ಕ್ರಾಫ್ಟ್ ವಿಜ್ಞಾನ ಮಾದರಿ ಸ್ಪರ್ಧೆಯ ಕೋ ಆರ್ಡಿನೇಟರ್ ಕೃಷ್ಣಪ್ರಸಾದ್ ಹಾಗೂ ತೀರ್ಪುಗಾರರಾಗಿ ಸಂವೇದ್ ಹಾಗೂ ಜನನಿ ಭಾಗವಹಿಸಿದರು.
ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಯತನ್ , ಕಾರ್ತಿಕ್ 1000ರೂ ನಗದು ಪುರಸ್ಕಾರ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. 8ನೇ ತರಗತಿಯ ವಿದ್ಯಾರ್ಥಿಗಳಾದ ಮುಬಶೀಲ್ ಮತ್ತು ಧನುಷ್ ಇವರು 750ರೂ ನಗದು ಪುರಸ್ಕಾರ, ಬೆಳ್ಳಿಯ ಪದಕ, ಪ್ರಶಸ್ತಿ ಪತ್ರವನ್ನು ಪಡೆದರು.10ನೇತರಗತಿಯ ತರಣ್ ಮತ್ತು ಧನ್ವಿತ್ ಇವರು ಕಂಚಿನ ಪದಕದೊಂದಿಗೆ 500ರೂ ನಗದು ಪುರಸ್ಕಾರ ಮತ್ತು ಪ್ರಶಸ್ತಿಯನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. 10ನೇತರಗತಿಯ ವಿದ್ಯಾರ್ಥಿನಿಯರಾದ ಧನ್ಯ ಶ್ರೀ ಹಾಗೂ ತೃಷಾ ಮತ್ತು 9ನೇ ತರಗತಿಯ ಕೃತಿಕಾ ಮತ್ತು ಧನ್ವಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಆಕಾಂಕ್ಷ ತಂಡದಿಂದ ಆಗಮಿಸಿದ ಕೃಷ್ಣಪ್ರಸಾದ್, ಜನನಿ, ಸಂವೇದ್ ಶಾಲು, ಸ್ಮರಣೆ ನೀಡಿ ಗೌರವಿಸಲಾಯಿತು. ಹಿರಿಯ ಶಿಕ್ಷಕಿ ಸುಮಂಗಲಾ ಕೆ ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕಿ ಶೋಭಾ ಬಿ ಆಕಾಂಕ್ಷ ಟ್ರಸ್ಟ್ ಪರಿಚಯಿಸಿದರು. ಇಂಗ್ಲೀಷ್ ಶಿಕ್ಷಕ ರಾಧಾಕೃಷ್ಣ ಕೋಡಿ ವಂದಿಸಿದರು. ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ,ಗಣಿತ ಶಿಕ್ಷಕಿ ಗೌತಮಿ ಬಿ ಹಾಗೂ ಕಂಪ್ಯೂಟರ್ ಶಿಕ್ಷಕಿ ಭವ್ಯ, ಶಿಕ್ಷಕೇತರ ಸಿಬ್ಬಂದಿ ನಾರಾಯಣ ಬನ್ನಿಂತಾಯ ಸಹಕರಿಸಿದರು.