ಪುತ್ತೂರು: ಕಳೆದ 28 ವರ್ಷಗಳಿಂದ ಔಷದಿ ಮಾರಾಟ ಸೇವೆಯಲ್ಲಿ ತೊಡಗಿರುವ ದರ್ಬೆ ಶ್ರೀರಾಮ ಸೌಧದಲ್ಲಿ ಮುಖ್ಯ ಶಾಖೆ ಹೊಂದಿರುವ ಉಷಾ ಮೆಡಿಕಲ್ಸ್ನ 4ನೇ ಶಾಖೆ ಬೊಳುವಾರು ಪ್ರಗತಿ ಆಸ್ಪತ್ರೆಯ ಎದುರುಗಡೆಯಿರುವ ಹಿರಣ್ಯ ಕಾಂಪ್ಲೆಕ್ಸ್ ನಲ್ಲಿ ಆ.25 ರಂದು ಬೆ.10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಙ ಡಾ.ಶ್ರೀಪತಿ ರಾವ್ ಉದ್ಘಾಟಿಸಲಿದ್ದು, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಕೆ.ಸುರೇಶ್ ಪುತ್ತೂರಾಯ, ಪುತ್ತೂರು ಮಾಯಿದೆ ದೇವುಸ್ ಚರ್ಚ್ನ ದರ್ಮಗುರುಗಳಾದ ವಂ.ಫಾದರ್ ಲಾರೆನ್ಸ್ ಮಸ್ಕರೇನಸ್, ಮಾಡನ್ನೂರು ಜುಮಾ ಮಸೀದಿಯ ಖತೀಬರಾದ ಎಸ್. ಬಿ.ಮಹಮ್ಮದ್ ದಾರಿಮಿ ಉಪ್ಪಿನಂಗಡಿ, ಹಿರಣ್ಯ ಕಾಂಪ್ಲೆಕ್ಸ್ನ ಮಾಲಕರಾದ ವಜ್ರೇಶ್ವರಿ ಜಿ. ಭಟ್ ಹಿರಣ್ಯ ಭಾಗವಹಿಸಲಿದ್ದಾರೆ. ಗ್ರಾಹಕರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಬೇಕಾಗಿ ಸಂಸ್ಥೆಯ ಮಾಲಕರಾದ ಅರುಣಾ ಭಟ್, ಪಿ ಗಣೇಶ್ ಭಟ್ ಮತ್ತು ಆದಿತ್ಯ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 28 ವರ್ಷಗಳಿಂದ ಔಷಧಿ ಮಾರಾಟ ಸೇವೆಯಲ್ಲಿ ತೊಡಗಿರುವ ನಾವು ದರ್ಬೆಯಲ್ಲಿ ಮೊದಲ ಶಾಖೆ ಪ್ರಾರಂಭಿಸಿ, ಬಳಿಕ ಪಂಜದ ವಿ.ಕೆ ರೆಸಿಡೆನ್ಸಿಯಲ್ಲಿ , ನೆಹರೂನಗರದ ಸುಲೈಮಾನ್ ಟವರ್ ನಲ್ಲಿ ಶಾಖೆಯನ್ನು ತೆರೆದಿದ್ದು, ಇದೀಗ 4ನೇ ಶಾಖೆಯನ್ನು ಬೊಳುವಾರಿನ ಹಿರಣ್ಯ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಿಸುತಿದ್ದೇವೆ. ನಮ್ಮಲ್ಲಿ ಹೆಸರಾಂತ ಕಂಪೆನಿಗಳ ಔಷಧಿಗಳು, ಪೆಟ್ ಫುಡ್, ಪಶು ಔಷಧಿಗಳು, ಸರ್ಜಿಕಲ್ ಐಟಂಗಳು, ವಾಟರ್ ಬೆಡ್, ವೀಲ್ ಚೇರ್, ನೆಬಿಲೈಸರ್, ವಾಕಿಂಗ್ ಸ್ಟಿಕ್, ಮೆಡಿಕೇಟೆಡ್ ಫೂಟ್ ವೇರ್, ಯೋಗ ಮ್ಯಾಟ್, ವಾಕರ್, ಕಾಸ್ಮೆಟಿಕ್ಸ್ ಐಟಂಗಳು ದೊರೆಯುತ್ತದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಂಡು ಸಂಸ್ಥೆಯ ಯಶಸ್ಸಿಗೆ ಸಹಕರಿಸಿ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.