ಪುತ್ತೂರು: ಶಾಸಕರ ಅಶೋಕ್ ರೈ ಅವರ ಬೆಲೆಬಾಳುವ ಮೌಂಟ್ ಬ್ಲಾಂಕ್ ಪೆನ್ ಕಾಣೆಯಾಗಿತ್ತು.ಕಾಣೆಯಾಗಿದ್ದ ಪೆನ್ ಗಾಗಿ ಮೂರು ದಿನ ಹುಡುಕಾಡಿದ್ದರು, ಕಾರ್ಯಕ್ರಮ ಹೋದ ಕಡೆಗಳಿಗೆ ಕರೆ ಮಾಡಿ ಪೆನ್ ಸಿಕ್ಕಿತ್ತ ಎಂದು ವಿಚಾರಿಸಿದ್ದರು.
ಕಾಣೆಯಾದ ಪೆನ್ ಎಲ್ಲೂ ಸಿಗದೇ ಇದ್ದಾಗ ಆದರ ಆಸೆಯನ್ನೇ ಬಿಟ್ಟಿದ್ದರು. ಆದರೆ ವಾರದ ಬಳಿಕ ಕಾಣೆಯಾದ ಪೆನ್ ಮರಳಿ ಶಾಸಕರಿಗೆ ಸಿಕ್ಕಿದೆ ಈ ವಿಚಾರವನ್ನು ಶಾಸಕರು ವಿಟ್ಲದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಶಾಸಕರು ತನ್ನ ಸ್ನೇಹಿತರಾದ ದಿವಾಕರ ದಾಸ್ ನೇರ್ಲಾಜೆಯವರು ಮೈಸೂರಲ್ಲಿ ಕಾರ್ಯಕ್ರಮಕ್ಕೆ ಕರೆದಿದ್ರು.ಆ ಕಾರ್ಯಕ್ರಮಕ್ಕೆ ಶಾಸಕರು ತೆರಳಿದ್ದರು. ಸಭೆಯಲ್ಲಿ ಒಂದಷ್ಟು ಮಂದಿಗೆ ಶಾಸಕರು ಸನ್ಮಾನವನ್ನುಮಾಡಿದ್ದರು.

ಸನ್ಮಾನ ಮುಗಿದು ಹೊರಡುವ ವೇಳೆ ಶಾಸಕರ ಜೇಬಲ್ಲಿದ್ದ ಪೆನ್ ಮಿಸ್ ಆಗಿತ್ತು. ಅಲ್ಲೆಲ್ಲಾ ಹುಡುಕಾಡಿದರು ಪೆನ್ ಸಿಗಲಿಲ್ಲ. ಪೆನ್ ಹೋದದ್ದೆ …ಎಂದು ಅಲ್ಲಿಂದ ಮರಳಿದ್ದರು. ಪೆನ್‌ಮಿಸ್ ಆದ ಘಟನೆಯನ್ನು ಸ್ನೇಹಿತ ದಿವಾಕರದಾಸ್ ರಲ್ಲಿ ಹೇಳಿಕೊಂಡಿದ್ದರು.ದಿವಾಕರ ಅವರು ಈ ವಿಚಾರವನ್ನು ತನ್ನ ಅಪ್ತರಲ್ಲಿ ಹೇಳಿಕೊಂಡಿದ್ದರು.
ಆ ವೇಳೆ ಮಹಿಳೆಯೋರ್ವರು ಕರೆ ಮಾಡಿ ತನಗೆ ಸನ್ಮಾನಮಾಡಿದ ಶಾಲ್ ನಲ್ಲಿ ಪೆನ್ನೊಂದು ಕಂಡ ಹಾಗೆ ಇತ್ತು ಎಂದು ಹೇಳಿದ್ದರು. ಮರು ದಿನ ಮಹಿಳೆ ಸನ್ಮಾನದ ಶಾಲ್ ನಲ್ಲಿ ಪೆನ್ ಒಂದಿದೆ ಎಂದು ದಿವಾಕರ್ ಗೆ ತಿಳಿಸಿದ್ದಾರೆ. ದಿವಾಕರ್ ಅವರು ಆ ಪೆನ್ನನ್ನು ಚೆಕ್‌ಮಾಡುವಾಗ ಶಾಸಕರ ಮಿಸ್ ಆದ ಪೆನ್ ಎಂದು ದೃಡವಾಗಿತ್ತು. ಕೂಡಲೇ ಅದನ್ನು ಶಾಸಕರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅಷ್ಡಕ್ಕೂ ಆ ಪೆನ್ ಬೆಲೆ ಎಷ್ಟು ಗೊತ್ತಾ? 65000₹