ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇಲ್ಲಿಯ ಶಾಲೆಯ ಕ್ರೀಡಾ ಮಕ್ಕಳಿಗೆ ಎಂ.ಸಿ.ಸಿ ಸೂರಂಬೈಲು ಇವರ ವತಿಯಿಂದ ಜೆರ್ಸಿಯನ್ನು ಆ.23 ರಂದು ಕೊಡುಗೆಯಾಗಿ ನೀಡಿದರು.
ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ರೈ ಸೂರಂಬೈಲು ಮತ್ತು ಶಾಲಾ ಹಿರಿಯ ವಿದ್ಯಾರ್ಥಿ ಮನೋಜ್ ರೈ ಸೂರಂಬೈಲು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದಾರ ವಸಂತ್ ಆರ್ಲಪದವು ಹಾಗೂ ವಸಂತ್ ಕುರೂಪ್ ಭರಣ್ಯ, ಮುಖ್ಯಗುರು ಊರ್ಮಿಳಾ ಕೆ, ಸಹ ಶಿಕ್ಷಕರಾದ ನಾಗೇಶ ಪಾಟಾಳಿ, ಪವಿತ್ರ ಎಂ ಆರ್, ಅತಿಥಿ ಶಿಕ್ಷಕಿ ಸುಪ್ರೀತಾ ಹಾಗೂ ಗೌರವ ಶಿಕ್ಷಕಿಯರಾದ ವಿದ್ಯಾಲಕ್ಷ್ಮೀ ಹಾಗೂ ಯಶಸ್ವಿನಿ ಉಪಸ್ಥಿತರಿದ್ದರು.