ಕಾಣಿಯೂರು: ಸರಸ್ವತಿ ವಿದ್ಯಾಲಯ ಕಡಬದಲ್ಲಿ ನಡೆದಂತಹ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ವಿದ್ಯಾರ್ಥಿನಿ ಆರಾಧ್ಯ (6ನೇ) ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಧ್ರುವಕುಮಾರ್ ಮತ್ತು ಚೈತ್ರ ದಂಪತಿಗಳ ಪುತ್ರಿ.
ಹಾಗೆಯೇ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಮನ್ಯು ರೈ (8ನೇ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲಗದ್ದೆ ಸುಧೇಶ್ ರೈ ಮತ್ತು ಪ್ರಮೀಳ ರೈ ದಂಪತಿಗಳ ಪುತ್ರ.