ಬೆಳಕಿನ ಹಬ್ಬಕ್ಕೆ ಅಕ್ಷರಗಳ ಸಾಲು : ಸುದ್ದಿ ಬಿಡುಗಡೆ ಪುತ್ತೂರು – ದೀಪಾವಳಿ ವಿಶೇಷಾಂಕ 2025

0

‘ನಾವು ಹೆಜ್ಜೆ ಇಟ್ಟಿದ್ದೇವೆ.. ನೀವು ನಮ್ಮೊಂದಿಗೆ ಹೆಜ್ಜೆ ಹಾಕಿ’

ಪುತ್ತೂರು: ದೀಪಾವಳಿ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಈ ಬಾರಿಯೂ ಬೆಳಕಿನ ಹಬ್ಬಕ್ಕೆ ಅಕ್ಷರಗಳ ಹಣತೆಯನ್ನು ಬೆಳಗಿಸಲು ಸುದ್ದಿ ಬಿಡುಗಡೆ ಸಿದ್ಧವಾಗಿದೆ.

ಕಳೆದ ವರುಷ 2024ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಗೊಂಡ ‘ದೀಪಾವಳಿ ವಿಶೇಷಾಂಕ-2024’ಕ್ಕೆ ಉತ್ತಮ ರೀತಿಯ ಸ್ಪಂದನೆ ದೊರಕಿದ್ದು, 150 ಪುಟಗಳ ಈ ವಿಶೇಷಾಂಕದಲ್ಲಿ ನಾಡಿನ ಖ್ಯಾತ ಕಥೆಗಾರ ಜೋಗಿ, ಈ ನೆಲದ ಬರಹಗಾರ ಡಾ. ಪ್ರಭಾಕರ ಶಿಶಿಲ ಸೇರಿದಂತೆ ಹಲವು ಲೇಖಕರ ಬರಹಗಳು, ಪ್ರವಾಸಿ ಕಥನ, ಆರೋಗ್ಯ ಮಾಹಿತಿ, ಸೆಲ್ಫೀ ಕಾರ್ನರ್, ಮಕ್ಕಳ ಚಿತ್ರ, ಕವನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳಿದ್ದವು.

ಈ ಬಾರಿಯೂ ಬೆಳಕಿನ ಹಬ್ಬಕ್ಕೆ ಹಲವಾರು ವೈಶಿಷ್ಟ್ಯಗಳ ಜೊತೆ ಜನತೆಗೆ ಬರವಣಿಗೆಗಳ ರಸದೌತಣ ಉಣಬಡಿಸಲು ಸುದ್ದಿ ಬಿಡುಗಡೆ ಪುತ್ತೂರು ಸಿದ್ಧತೆ ನಡೆಸುತ್ತಿದ್ದು, ನಾವು ಹೆಜ್ಜೆ ಇಟ್ಟಿದ್ದೇವೆ.. ನೀವು ನಮ್ಮೊಂದಿಗೆ ಹೆಜ್ಜೆ ಹಾಕಿದರೆ ಈ ಬಾರಿಯ ದೀಪಾವಳಿ ಸಂಚಿಕೆ ಕೂಡ ಜನಮಾನಸದಲ್ಲಿ ಹಚ್ಚಳಿಯದೆ ಉಳಿಯುವುದರಲ್ಲಿ ಸಂಶಯವಿಲ್ಲ. ತಾಲೂಕು ಮಟ್ಟದ ಪತ್ರಿಕೆಯಾಗಿ ಜನಮಾನಸದಲ್ಲಿ ನೆಲೆ ನಿಂತಿರುವ, ಅತ್ಯಧಿಕ ಪ್ರಸರಣ ಸಂಖ್ಯೆ ಹೊಂದಿರುವ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ವತಿಯಿಂದ ದೀಪಾವಳಿಗೆ ವಿಶೇಷ ಸಂಚಿಕೆ ಹೊರತರಲಾಗುವುದು. ಈ ಸಂಚಿಕೆಯು ವರ್ಣರಂಚಿತ, ಸಂಗ್ರಹಯೋಗ್ಯ ಸಂಚಿಕೆಯಾಗಿ ಪ್ರಕಟಗೊಳ್ಳಲಿದ್ದು, ಓದುಗರಿಂದ ವಿವಿಧ ಲೇಖನ, ಮಿನಿಕಥೆ, ಕವನ, ಹಾಸ್ಯಚಟಾಕಿ ಮುಂತಾದವುಗಳನ್ನು ಆಹ್ವಾನಿಸಲಾಗಿದೆ.

ಮುಖಪುಟದಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಳ್ಳಲು ಅವಕಾಶ
ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೊಗ್ರಾಫರ್ ಮೂಲಕ ತೆಗೆದ 6X4 ಅಳತೆಯ ಮುದ್ರಿತ ಫೋಟೋ ಮತ್ತು ಇ ಮೈಲ್ ಮೂಲಕವೂ ಕಳುಹಿಸಿಕೊಡಬೇಕು. ಒಬ್ಬರು ಗರಿಷ್ಠ ಮೂರು ಫೋಟೋ ಕಳುಹಿಸಬಹುದು. ಸಾಂಪ್ರದಾಯಿಕ ಉಡುಗೆಯ ಫೋಟೋಗಳಿಗೆ ಮಾತ್ರ ಅವಕಾಶ.

ಅವಳಿ ಜವಳಿ ಮಕಳ ಫೋಟೋ
ಮಕ್ಕಳು ಅವಳಿ ಜವಳಿಗಳಾಗಿ ಹುಟ್ಟುವುದು ಲೋಕದಲ್ಲಿ ವಿಶೇಷವಾಗಿದೆ. ಇಂತಹ ಮಕ್ಕಳನ್ನು ನೋಡುವುದು ಕೂಡ ನಮಗೆ ಖುಷಿ ತರುತ್ತದೆ. 15 ವರ್ಷದ ಒಳಗಿನ ಅವಳಿ ಜವಳಿ ಮಕ್ಕಳ ಪರಿಚಯವನ್ನು ಓದುಗರಿಗೆ ತಿಳಿಸುವ ಉದ್ದೇಶಕ್ಕಾಗಿ ತಾವು ಫೋಟೋ ಮತ್ತು ಕುಟುಂಬದ ವಿವರ ಕಳುಹಿಸಬೇಕು.

ಬಸ್ ಸಿಗದೇ ಆದ ಅವಾಂತರ
ನಾವೆಲ್ಲರೂ ಬಸ್‌ನಲ್ಲಿ ಪ್ರಯಾಣ ಮಾಡುತ್ತೇವೆ. ಕೆಲವೊಮ್ಮೆ ಕಾದು-ಕಾದು ಸುಸ್ತಾಗಿ ಬಸ್ ಬಾರದೆ ಹಲವು ತೊಂದರೆಗಳನ್ನು ಅನುಭವಿಸಿದ್ದೇವೆ. ಈ ರೀತಿ ಆದ ಅವಾಂತರವನ್ನು ತಿಳಿಸಿ.

ಹೊಸ/ವಿಶೇಷ ಖಾದ್ಯದ ರುಚಿ
ಅಡುಗೆ ಮಾಡುವುದು ಕೆಲವರಿಗೆ ಖುಷಿ ನೀಡುತ್ತದೆ ಹಾಗಾಗಿ ಕೆಲವರು ಹೊಸ/ವಿಶೇಷ ತಿಂಡಿ ತಿನಿಸುಗಳನ್ನು ಮಾಡಿಕೊಂಡಿರುತ್ತಾರೆ. ಇಂತಹ ಖಾದ್ಯಗಳ ಪರಿಚಯವನ್ನು ಓದುಗರಿಗೂ ತಿಳಿಸುವ ಪ್ರಯತ್ನಕ್ಕಾಗಿ ಮಾಹಿತಿ ಕಳಿಸಿ

ದೇಶ ಕಾಯುವ ಸೈನಿಕರ ಹೋರಾಟದ ಅನುಭವ ಕಥನ
ತನ್ನವರಿಂದ ದೂರವಿದ್ದು ದೇಶವನ್ನು ಹಗಲು-ರಾತ್ರಿ ಎನ್ನದೇ ಶತ್ರುಗಳಿಂದ ರಕ್ಷಿಸಲು ಮಾಡಿದ ಹೋರಾಟದ ಅನುಭವ ಕಥನ ಕಳುಹಿಸಿ.

ಜೀವನದಲ್ಲಿ ಪೇಚಿಗೆ ಸಿಲುಕಿದ ಘಟನೆ
ಜೀವನದಲ್ಲಿ ಒಮ್ಮೆಯಾದರೂ ಎಲ್ಲರೂ ಪೇಚಿಗೆ ಸಿಲುಕಿರುತ್ತಾರೆ. ಅದನ್ನು ಮತ್ತೆ ಮೆಲುಕು ಹಾಕಿದರೆ ನಗು ಬರುತ್ತದೆ. ಇದನ್ನು ಓದುಗರಿಗೂ ತಿಳಿಸಿ ಅವರನ್ನು ನಗಿಸುವ ಕಾರಣಕ್ಕೆ ಪೇಚಿಗೆ ಸಿಲುಕಿದ ಘಟನೆಯ ವಿವರ ಕಳುಹಿಸಿ.

ವಿದ್ಯಾರ್ಥಿ ಜೀವನದ ಪ್ರವಾಸ ಕಥನ
ವಿದ್ಯಾರ್ಥಿ ಜೀವನದಲ್ಲಿ ಎಲ್ಲರೂ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸ ಹೋಗಿರುತ್ತಾರೆ. ಇದರ ನೆನಪುಗಳು ಅಜರಾಮರ. ಇಂತಹ ಅನುಭವ ಕಥನವನ್ನು ಕಳುಹಿಸಿ.

ಪಟಾಕಿಯಿಂದಾದ ಅಚಾತುರ್ಯ
ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವುದೇ ಸಂಭ್ರಮವಾಗಿದೆ. ಪಟಾಕಿ ಸಿಡಿಸಿ ಯಾವುದಾದರೂ ಅಚಾತುರ್ಯಕ್ಕೆ ಒಳಗಾಗಿದ್ದರೆ ಆ ಘಟನೆಯ ಬಗ್ಗೆ ಕಳುಹಿಸಿ.

ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಲೇಖನ, ಕವನ, ಕಥೆ, ಹಾಸ್ಯಲೇಖನಗಳನ್ನು ಕಳುಹಿಸಿ.

ಬಲಿಯೇಂದ್ರ ಮರದ ಶೃಂಗಾರ
ದೀಪಾವಳಿ ಸಂದರ್ಭದ ಬಲಿಪಾಡ್ಯದಂದು ಬಲಿಯೇಂದ್ರ ಮರವನ್ನು ಶೃಂಗಾರ ಮಾಡಿ ಆಚರಣೆ ಮಾಡಲಾಗುತ್ತದೆ. ಹೀಗೆ ಅತ್ಯುತ್ತಮ ರೀತಿಯಲ್ಲಿ ಶೃಂಗಾರ ಮಾಡಿದ ಬಲಿಯೇಂದ್ರ ಮರದ ಫೋಟೋ ಕಳುಹಿಸಿ (ಉತ್ತಮ ಫೋಟೋಗಳನ್ನು ಆಯ್ಕೆ ಮಾಡಲಾಗುವುದು)

ಕಾಡುಪ್ರಾಣಿಯಿಂದ ಪಟ್ಟಪಾಡು
ಕಾಡುಪ್ರಾಣಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಕಾಡುಪ್ರಾಣಿಯಿಂದ ಒಮ್ಮೊಮ್ಮೆ ತೊಂದರೆ ಅನುಭವಿಸಿದ್ದೂ ಇದೆ. ಕಾಡುಪ್ರಾಣಿಯಿಂದ ತೊಂದರೆಗೆ ಸಿಲುಕಿದ ಬಗ್ಗೆ ಬರೆಯಿರಿ

ಮನೆಮದ್ದು ಸಲಹೆ
ಅನಾರೋಗ್ಯಕ್ಕೀಡಾದಾಗ ತಕ್ಷಣಕ್ಕೆ ಮನೆಮದ್ದು ಸಹಕಾರಿಯಾಗುತ್ತದೆ. ಇಂತಹ ಮನೆಮದ್ದಿನ ವಿವರ ಕಳುಹಿಸಿ

ಪ್ರಕೃತಿಯ ಮಡಿಲಲ್ಲಿ ಸೆಲ್ಪಿ
ಮೊಬೈಲಿನಲ್ಲಿ ಸೆಲ್ಪಿ ತೆಗೆಯುವುದು ಒಂದು ರೀತಿಯ ಹುಚ್ಚು, ಸೆಲ್ಪಿ ಫೋಟೋಗಳು ಅವಿಸ್ಮರಣೀಯ ಅನುಭವ ತರುತ್ತದೆ. ಹೀಗೆ ಪ್ರಕೃತಿಯ ಮಡಿಲಿನಲ್ಲಿ ತೆಗೆದ ಅಪರೂಪದ ಸೆಲಿ ಫೋಟೋ ಕಳುಹಿಸಿ,

ಮಕ್ಕಳಿಗಾಗಿ ಚಿತ್ರ ಚಿತ್ತಾರ
ಮಕ್ಕಳಿಗೆ ಚಿತ್ರ ಬಿಡಿಸುವುದು ಖುಷಿಯ ವಿಚಾರವಾಗಿದೆ. ಮಕ್ಕಳಿಗಾಗಿ ಮಕ್ಕಳೇ ರಚಿಸಿದ ವರ್ಣಚಿತ್ರದ ಚಿತ್ತಾರ ಕಳುಹಿಸಿ. (ಚಿತ್ರ ಎ4 ಶೀಟ್ ನಲ್ಲಿ ಲ್ಯಾಂಡ್‌ಸ್ಕೆಪ್ ನಲ್ಲಿರಲಿ, ಹೆಸರು, ವಿಳಾಸ ಅಗತ್ಯ)

ಶತಾಯುಷಿ
ಶತಾಯುಷಿಯಾಗಿ ಬದುಕುವುದೇ ಭಾಗ್ಯ. ತಮ್ಮ ಮನೆ ಅಥವಾ ಕುಟುಂಬದಲ್ಲಿ ಶತಾಯುಷಿಗಳಿದ್ದರೆ ಅಂತವರ ಹೆಸರು, ವಿಳಾಸ, ವಯಸ್ಸು, ಫೋಟೋ ಕಳುಹಿಸಿ.

ಹಬ್ಬಗಳ ಆಚರಣೆಯಲ್ಲಿ ಮನೆಮಂದಿ
ಎಲ್ಲಾ ಧರ್ಮಗಳಲ್ಲಿ ಹಲವು ಹಬ್ಬಗಳ ಆಚರಣೆಗಳು ಇರುತ್ತವೆ. ಇಂತಹ ಆಚರಣೆಗಳಲ್ಲಿ ಮನೆಮಂದಿ ಪಾಲ್ಗೊಳ್ಳುತ್ತಾರೆ. ಇಂತಹ ಸಂಭ್ರಮದ ಫೋಟೋ ಕಳುಹಿಸಿ

ರಂಗೋಲಿ ಬಿಡಿಸುವ ದೃಶ್ಯ
ಹಬ್ಬಗಳ ಸಂದರ್ಭದಲ್ಲಿ ಮನೆಮಂದಿ, ಸ್ನೇಹಿತರು ಸೇರಿಕೊಂಡು ರಂಗೋಲಿ ಬಿಡಿಸುವ ದೃಶ್ಯದ ಫೋಟೋ ಕಳುಹಿಸಿ

ಆಧುನಿಕತೆ ಭರದಲ್ಲಿ ಯುವಪೀಳಿಗೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆಯೇ?
ಈ ವಿಷಯಕ್ಕೆ ಸಂಬಂಧಿಸಿ ಲೇಖನ ಬರೆದು ಕಳುಹಿಸಿ. ಲೇಖನ 150 ಪದಗಳು ಮೀರದಿರಲಿ.

ನಿಬಂಧನೆಗಳು

  • ಆಯ್ದ ಫೋಟೋ, ಬರಹ, ಚಿತ್ರಗಳನ್ನು ಮಾತ್ರ ಪ್ರಕಟಿಸಲಾಗುವುದು
  • ಬರಹಗಳನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕವೇ ಕಳುಹಿಸಬೇಕು. (ಟೈಪ್ ಮಾಡಿದ ಬರಹಗಳಿಗೆ ಅವಕಾಶ)
  • ಫೋಟೊ, ಬರಹಗಳನ್ನು ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಕಡ್ಡಾಯವಾಗಿ ಕಳುಹಿಸಿಕೊಡಿ

ಸೆ.15 ಕಳುಹಿಸಿಕೊಡಲು ಅಂತಿಮ ದಿನ

ಕಳುಹಿಸಬೇಕಾದ ವಿಳಾಸ : ಸುದ್ದಿ ಬಿಡುಗಡೆ, ದೀಪಾವಳಿ ಸಂಚಿಕೆ ವಿಭಾಗ. ಹಳೆ ಬಝಾರ್ ಅಂಚೆ ಕಛೇರಿ ಬಳಿ ಪುತ್ತೂರು : 7829668949, ಇ-ಮೇಲ್ : suddideepavali10@gmail.com

LEAVE A REPLY

Please enter your comment!
Please enter your name here