ರಾಮಕುಂಜ: ಕಳೆದ ಎರಡು ದಿನಗಳಿಂದ 34 ನೆಕ್ಕಿಲಾಡಿ, ಉಪ್ಪಿನಂಗಡಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಆ.25ರಂದು ಮುಂಜಾನೆ ಕೊಯಿಲ ಕಡೆಗೆ ಬಂದಿದೆ ಎಂದು ವರದಿಯಾಗಿದೆ.

ಕೊಯಿಲ ಗ್ರಾಮದ ಬೇಂಗದಪಡ್ಪು ನಿವಾಸಿ ಶಾಂತರಾಮ ಎಂಬರವರ ತೋಟದಲ್ಲಿ ಕಾಡಾನೆ ಕೃಷಿಗೆ ಹಾನಿಗೊಳಿಸಿದೆ. ಅಲ್ಲಿಂದ ವಿನಯಕುಮಾರ್ ರೈ ಕೊಯಿಲ ಪಟ್ಟೆ ಅವರ ತೋಟದ ಮೂಲಕ ಮಾಳ ಕಡೆಗೆ ಕಾಡಾನೆ ಸಂಚರಿಸಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾಡಾನೆ ಸಂಚಾರದ ಜಾಡು ಹಿಡಿದು ಹುಡುಕಾಟ ನಡೆಸುತ್ತಿದ್ದಾರೆ.