ಪುತ್ತೂರು: ಶಾಂತಿನಗರ ಪರಿಸರದಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡುವುದರ ವಿರುದ್ಧ ಜನಾಕ್ರೋಶದ ಸಮಾಲೋಚನಾ ಸಭೆ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಆ.24ರಂದು ನಡೆಯಿತು.
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಶಾಂತಿನಗರ ಸಮೀಪದ ಕಲ್ಪನೆ ಬಳಿಯಿರುವ ಹಿಂದೂ ರುದ್ರಭೂಮಿಯ ಪಕ್ಕದಲ್ಲಿ ಸರಕಾರದ ಲಕ್ಷಾಂತರ ರೂ ಅನುದಾನದಲ್ಲಿ ನಿರ್ಮಾಣವಾಗಲಿರುವ ಮಲತ್ಯಾಜ್ಯ ಘಟಕ ಅವೈಜ್ಞಾನಿಕವಾಗಿದೆ. ಈ ಘಟಕ ನಿರ್ಮಾಣವಾದರೆ ಪರಿಸರದ ಜನರಿಗೆ ತೀರಾ ತೊಂದರೆಯಾಗಲಿದೆ. ಆದ್ದರಿಂದ ಮಲ ತ್ಯಾಜ್ಯ ಘಟಕ ನಿರ್ಮಾಣವನ್ನು ವಿರೋಧಿಸಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಥಳೀಯ ಜನರ ಬೇಡಿಕೆಗೆ ಸಂಬಂಧಿಸಿದವರು ಸ್ಪಂದಿಸದೇ ಇದ್ದರೆ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು. ಹೋರಾಟ ಸಮಿತಿಗೆ ಎಲ್ಲಾ ರಾಜಕೀಯ ಪಕ್ಷ ಮತ್ತು ಸಾಮಾಜಿಕ ಸಂಘಟನೆಯವರನ್ನು ಸೇರಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ರೈ ಎಸ್ಟೇಟ್ ಮತ್ತು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸುದೇಶ್ ಶೆಟ್ಟಿ ಶಾಂತಿನಗರ, ನೆಕ್ಕಿಲಾಡಿ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ನಿಕಟಪೂರ್ವ ಆಡಳಿತ ಮೊಕ್ತೇಸರ ಯು.ಜಿ. ರಾಧ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಉಮೇಶ್ ಪಣಿತೋಟ, ಕರುವೇಲು ಶ್ರೀರಾಮ ಭಜನಾ ಮಂದಿರದ ಸದಸ್ಯರಾದ ಪ್ರಸಾದ್ ಪಚ್ಚಾಡಿ, ಗಣೇಶ್ ಪಚ್ಚಾಡಿ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಶಾಂತಿನಗರದ 2ನೇ ಬೈಲುವಾರು ಸಮಿತಿಯ ಮುಖ್ಯಸ್ಥ ಸತೀಶ್ ಎ.ಎಸ್. ಶಾಂತಿನಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ. ಎಂ.ಸಿ. ಅಧ್ಯಕ್ಷ ಮುನೀರ್ ಶಾಂತಿನಗರ, ಯುವ ಕಾಂಗ್ರೆಸ್ ಮುಂದಾಳು ಪ್ರಹ್ಲಾದ್ ಬಿ. ಶಾಂತಿನಗರ, ನಿಕ್ಷಿತ್ ಶಾಂತಿನಗರ, ಅಚಲ್ ಉಬರಡ್ಕ, ಪ್ರೀತಮ್ ಶೆಟ್ಟಿ ಬಿ.ಕೆ. ಶಾಂತಿನಗರ, ರೋಹಿತ್ ಶಾಂತಿನಗರ, ವಸಂತ್ ಗೌಡ ಪನಿತೋಟ, ಶಿವಪ್ರಸಾದ್ ಪನಿತೋಟ,ಯೋಗೀಂದ್ರ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.