ಹೆಚ್ಚಳವಾದ ಘನತ್ಯಾಜ್ಯ ವಿಲೇವಾರಿ ಸೇವಾ ಶುಲ್ಕವನ್ನು ಕಡಿಮೆ ಮಾಡಿಸಿದ ಹಿನ್ನೆಲೆ – ಪುತ್ತೂರು ಶಾಸಕರಿಗೆ ಸಭಾಭವನಗಳ ಒಕ್ಕೂಟದಿಂದ ಸನ್ಮಾನ

0

ಪುತ್ತೂರು: ಉದ್ದಿಮೆ ಪರವಾನಿಗೆಯಲ್ಲಿ ಕಲ್ಯಾಣ ಮಂಟಪ, ಸಭಾಭವನಗಳಿಗೆ ನಿಗದಿಪಡಿಸಿದ ದರಗಳು ಲೋಪದೋಷದಿಂದ ಕೂಡಿರುವುದರ ಕುರಿತು ಮನವಿಗೆ ಸ್ಪಂಧಿಸಿ ಘನತ್ಯಾಜ್ಯ ವಿಲೇವಾರಿ ಸೇವಾ ಶುಲ್ಕವನ್ನು ಕಡಿಮೆ ಮಾಡಲು ಕಾರಣ ಕರ್ತರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪುತ್ತೂರು ತಾಲೂಕು ಸಭಾಭವನಗಳ ಒಕ್ಕೂಟದಿಂದ ಶಾಸಕರ ಕಚೇರಿಯಲ್ಲಿ ಸನ್ಮಾನಿಸಿದರು.


ಉದ್ದಿಮೆ ಪರವಾನಿಗೆ ಉಪವಿಧಿಯಲ್ಲಿ ಕಲ್ಯಾಣ ಮಂಟಪಗಳಿಗೆ ವಿಧಿಸಿದ ದರವು ಲೋಪದೋಷದಿಂದ ಕೂಡಿತ್ತು. ಈ ಕುರಿತು ಕಲ್ಯಾಣ ಮಂಟಪ ಸಭಾಭವನದ ಮಾಲಕರು ಉದ್ದಿಮೆ ಪರವಾನಿಗೆ ಹೆಚ್ಚಳದ ಕುರಿತು ಅಸಮಾಧನ ವ್ಯಕ್ತಪಡಿಸಿದರು. ಈ ಕುರಿತು ಶಾಸಕರಿಗೆ ಪುತ್ತೂರು ತಾಲೂಕು ಸಭಾಭವನಗಳ ಒಕ್ಕೂಟದಿಂದ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂಧಿಸಿದ ಶಾಸಕರು ತಯಾರಿಸಲಾದ ಉಪನಿಯಮದಲ್ಲಿ ಉದ್ದಿಮೆ ಪವಾನಿಗೆ ಶುಲ್ಕದೊಂದಿಗೆ ಸಂಗ್ರಹಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಸೇವಾ ಶುಲ್ಕದಲ್ಲಿ ಕೆಲವೊಂದು ದರಗಳ ಪರಿಷ್ಕರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಇದೀಗ ಶುಲ್ಕ ಕಡಿಮೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕು ಸಭಾಭವನಗಳ ಒಕ್ಕೂಟದ ಸಂಚಾಲಕ ಚಿದಾನಂದ ಬೈಲಾಡಿ, ಅಧ್ಯಕ್ಷ ಮಾಧವ ಸ್ವಾಮಿ ಕಲಾಮಂದಿರ, ಉಪಾಧ್ಯಕ್ಷ ಕೊಟೆಚಾ ಹಾಲ್‌ನ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ ಕೆ, ಕೆಮ್ಮಿಂಜೆ ಸಭಾಭವನದ ಕೃಷ್ಣಪ್ರಸಾದ್, ಅರುಣ ಕಲಾಮಂದಿರದ ಡಾ. ರಾಘವೇಂದ್ರ ನಾಯಕ್, ದಿನೇಶ್ ಹೆಗ್ಡೆ ಮತ್ತಿತರರು ಶಾಸಕರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here