ಕಡಬ: ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಯ ಪ್ರಯುಕ್ತ ಸಂಗೀತ ಕಲಾನಿಧಿ ಡಾ. ವಿದ್ಯಾಭೂಷಣ್ ಬೆಂಗಳೂರು ಹಾಗೂ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಆ.26 ರಂದು ಸಂಜೆ ನಡೆಯಲಿದೆ.
ವಯಲಿನ್- ವಿದ್ವಾನ್ ಪ್ರಾದೇಶ್ ಆಚಾರ್ಯ, ಬೆಂಗಳೂರು, ಘಟಮ್ – ವಿದ್ವಾನ್ ವಿ.ಎಸ್.ರಘುನಂದನ್ ಬೆಂಗಳೂರು, ಮೃದಂಗ- ವಿದ್ವಾನ್ ನಾಗೇಂದ್ರ ಪ್ರಸಾದ್ ಬೆಂಗಳೂರು ಅವರುಗಳು ನುಡಿಸಲಿದ್ದಾರೆ ಎಂದು ದೇವಸ್ಥಾನ ದ ವಿವಿಧ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.