ಅರಿಯಡ್ಕ ಶಾಲೆಗೆ ಆಕರ್ಷಣ್ ಸಂಸ್ಥೆಯಿಂದ ಕೈ ತೊಳೆಯುವ ಘಟಕದ ಕೊಡುಗೆ

0

ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಅರಿಯಡ್ಕ ಸರಕಾರಿ ಹಿ ಪ್ರಾ ಶಾಲೆ ಗೆ ಕೈತೊಳೆಯುವ ಘಟಕವನ್ನು ಪುತ್ತೂರಿನ ಮುಕ್ರಂಪಾಡಿಯ ಆಕರ್ಷಣ್ ಸಂಸ್ಥೆಯವರು 30ನೇ ವರ್ಷದ ಪ್ರಯುಕ್ತ ಕೊಡುಗೆಯಾಗಿ ನೀಡಿದರು.

ನೂತನ ಘಟಕವನ್ನು ಸಂಸ್ಥೆಯ ವ್ಯವಸ್ಥಾಪಕ ,ಶಾಲೆಯ ಹಳೆ ವಿದ್ಯಾರ್ಥಿ ಎಸ್ ಪಿ ಬಶೀರ್ ರವರು ಉದ್ಘಾಟಿಸಿದರು.‌ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾನಿ, ಉಪಾಧ್ಯಕ್ಷೆ ಮೀನಾಕ್ಷಿ. ಗ್ರಾಪಂ ಸದಸ್ಯ ಹರೀಶ್ ಜಾರತ್ತಾರು. ರೇಣುಕಾ ಸತೀಶ್ ಕರ್ಕೆರ, ಎಸ್ ಡಿಎಂಸಿ ಅಧ್ಯಕ್ಷ ಸತೀಶ್ ಎಸ್, ಸದಸ್ಯರಾದ ಮಹಮ್ಮದ್ ಹನೀಫ್, ರೀಮಾ, ಸೀತಾರಾಮ ನಾಯ್ಕ, ಉದ್ಯಮಿ ಮೋಹನ್ ದಾಸ್ ರೈ, ನಿವೃತ್ತ ಯೋದ ಚಂದ್ರಶೇಖರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಕ್ಬಾಲ್ ಹುಸೇನ್ ,ಕಾರ್ಯದರ್ಶಿ ಪ್ರಮೋದ್ ರೈ, ಮಹಮ್ಮದ್ ಬೊಳ್ಳಾಡಿ, ಬಶೀರ್ ಕೌಡಿಚ್ಚಾರ್, ಸಂಶುದ್ದೀನ್, ಶಿಕ್ಷಣ ಸಂಯೋಜಕಿ ಅಮೃತಕಲಾ, ಗಣೇಶ್ ಶೇಕಮಲೆ, ಶರತ್ ಎರ್ಕ, ದಾಮೋದರ್ ರೈ ಪಣೆಕ್ಕಳ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here