ಪುತ್ತೂರು : ಹಬ್ಬದ ಸಲುವಾಗಿ ವಿಶೇಷ ರೈಲು !

0

ಪುತ್ತೂರು: ಮುಂದಿನ ದಿನ ದಸರಾ ಮತ್ತು ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಹೀಗಾಗಿ ಈ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿವಿಧ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ರೈಲು ಸೇವೆಯನ್ನು ಒದಗಿಸಲಾಗಿದೆ.


ಆ.26ರಂದು ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಯಶವಂತಪುರ ರೈಲು (ಸಂಖ್ಯೆ 06252) ಹೊರಡಲಿದ್ದು, ಮಂಗಳೂರಿನಿಂದ ಹೊರಟ ರೈಲು ಮಧ್ಯಾಹ್ನ ಗಂಟೆ 2.30ಕ್ಕೆ ಪುತ್ತೂರಿಗೆ ತಲುಪಿ ಬೆಂಗಳೂರಿಗೆ ತೆರಳಲಿದೆ. ರಾತ್ರಿ ಗಂಟೆ 10.40ಕ್ಕೆ ಯಶವಂತಪುರ ತಲುಪಲಿದೆ. ಇದರಲ್ಲಿ 7 ಜನರಲ್, 12 ಸ್ಲೀಪರ್, 3 ಎಸಿ ಕೋಚ್ ಇದೆ. ಅದೇ ರೀತಿ ಬೆಂಗಳೂರಿನಿಂದಲೂ ಪುತ್ತೂರು ಮಂಗಳೂರಿಗೆ ವಿಶೇಷ ರೈಲು ಹೊರಡಲಿದ್ದು, ಪ್ರಯಾಣಿಕರು ಸೌಲಭ್ಯ ಪಡೆಯಬಹುದು.

LEAVE A REPLY

Please enter your comment!
Please enter your name here