ಪುತ್ತೂರು: ಬೆಂಗಳೂರಿನ ಬನಶಂಕರಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಗಸ್ಟ್ 21 ರಂದು ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯು ಉತ್ತಮ ಸಾಧನೆಗೈದಿರುವರು.
9ನೇ ತರಗತಿಯ ಲಾಸ್ಯ ಕಿಶನ್ (ಕಿಶನ್ ಡಿ. ಪಿ ಮತ್ತು ದೀನಾ ಕಿಶನ್ ದಂಪತಿ ಪುತ್ರಿ) ಇವರು, 14 ವರ್ಷದ ಬಾಲಕಿಯರ 50 ಮೀಟರ್ ಫ್ರೀ ಸ್ಟೈಲ್, 50 ಮೀಟರ್ ಬ್ಯಾಕ್ಸ್ಟೋಕ್ ಮತ್ತು 50 ಮೀಟರ್ ಬಟರ್ ಫ್ಲೈ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಹಾಗೂ 4 X 100 ಮೀಟರ್ ರಿಲೇ ಫ್ರೀ ಸ್ಟೈಲ್ ಮತ್ತು 4 X 100 ಮೀಟರ್ ಮೆಡ್ಲೆ ರಿಲೇ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.