ಪುತ್ತೂರು: ಶ್ರೀ ದುರ್ಗಾಂಬಾ ಕಲಾಸಂಗಮ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 12ನೇ ಕಲಾಸೇವೆ ’ಸುಧನ್ವ ಮೋಕ್ಷ’ ತಾಳಮದ್ದಳೆ ಆ.23ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೇಶ್ ಭಟ್ ಪಳ್ಳದಕೋಡಿ-ನೂಜಿ, ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ-ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಗಣೇಶ್ ಭಟ್ ಬೆಳಾಲು, ಮೋಹನ ಶರವೂರು ಸಹಕರಿಸಿದರು. ಮುಮ್ಮೆಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ (ಹಂಸಧ್ವಜ), ಪ್ರಸಾದ್ ಸವಣೂರು (ಸುಧನ್ವ 1), ನಾರಾಯಣ ಭಟ್ ಆಲಂಕಾರು (ಪ್ರಭಾವತಿ), ರಾಮ್ ಪ್ರಕಾಶ್ ಕೊಡಂಗೆ (ಶಂಖಲಿಖಿತರು), ಕುಮಾರಿ ದೀಕ್ಷಾ ಪಿ.ಕೆ.(ವೃಷ ಕೇತು), ದಿವಾಕರ ಆಚಾರ್ಯ ಹಳೆನೇರೆಂಕಿ (ಅರ್ಜುನ 1), ಜಯರಾಂ ಗೌಡ ಬಲ್ಯ (ಕೃಷ್ಣ), ಗಣೇಶ್ ಹಿರಿಂಜ (ಅರ್ಜುನ 2), ಹೇಮಂತ್ ರೈ ಮನವಳಿಕೆ (ಸುಧನ್ವ 2) ಸಹಕರಿಸಿದರು.
ಸೇವಾರ್ಥಿಗಳಾಗಿ ಸದಾನಂದ ಕುಮಾರ್ ಮತ್ತು ಮನೆಯವರು ಮಡ್ಯೊಟ್ಟು ಆಲಂಕಾರು, ಕಾರುಣ್ಯ ಭಟ್ ಶರವೂರು ಬೆಂಗಳೂರು ಸಹಕರಿಸಿದರು. ಸೇವಾಕರ್ತರಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದ ನೀಡಲಾಯಿತು.
ಶ್ರೀ ದುರ್ಗಾಂಬಾ ಕಲಾ ಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ರಾಘವೇಂದ್ರ ಭಟ್ ತೋಟಂತಿಲ ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ದೇವಸ್ಥಾನದ ಸಿಬ್ಬಂದಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.